ಬೆಂಗಳೂರು [ಜು.19] : ರಾಜಕೀಯ ಹೈ ಡ್ರಾಮಾ ಮುಂದುವರಿದಿದೆ. ಇದೇ ವೇಳೆ ಕೋಲಾರ ಶಾಸಕ ಶ್ರೀನಿವಾಸ ಗೌಡ ಆಪರೇಷನ್ ಕಮಲ ವಿಚಾರವಾಗಿ  ಉಲ್ಟಾ ಹೊಡೆದಿದ್ದಾರೆ. 

ಮಲ್ಲೇಶ್ವರಂನ ಬಿಜೆಪಿ ಶಾಸಕ ಅಶ್ವಥ ನಾರಾಯಣ, ಮಾಜಿ ಶಾಸಕ ಸಿ.ಪಿ. ಯೋಗೇಶ್ವರ ಮತ್ತು ಯಲಹಂಕ ಶಾಸಕ ವಿಶ್ವನಾಥ್ ನನ್ನ ಮನೆಗೆ ನೇರವಾಗಿ ಬಂದು 5 ಕೋಟಿ ಹಣದ ಕೊಟ್ಟಿದ್ದರು. ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸದ್ರೂ, ಅದನ್ನು ಅಲ್ಲೇ ಇಟ್ಟು ಹೋಗಿದ್ರು ಎಂದು ಕೋಲಾರ ಶಾಸಕ ಶ್ರೀನಿವಾಸ್ ಗೌಡ ಸದನಕ್ಕೆ ತಿಳಿಸಿದರು.

ಈ ಹಿಂದೆ ವಿಚಾರಣೆ ವೇಳೆ ಆಪರೇಷನ್ ಕಮಲ ಫೇಲ್ ಮಾಡಲು ಹಣ ನೀಡಿದ್ದರು ಎಂದಿದ್ದೆ  ಎಂದು ಎಸಿಬಿ ಮುಂದೆ ಹೇಳಿದ್ದರು. ಅಲ್ಲದೇ ತಮ್ಮ ಲೆಟರ್ ಹೆಡ್ ನಲ್ಲಿಯೇ ಹೇಳಿಕೆ ದಾಖಲಿಸಿದ್ದರು. ಆದರೆ ಇದೀಗ ಉಲ್ಟಾ ಹೊಡೆದಿದ್ದು ಆಪರೇಷನ್ ಕಮಲಕ್ಕಾಗಿ ಹಣ ನೀಡಿದ್ದಾಗಿ ಹೇಳಿದ್ದಾರೆ.  

ಅವರ ಹೇಳಿಕೆ ಆಧರಿಸಿ ಎಸಿಬಿಯಲ್ಲಿ ಪ್ರಕರಣವನ್ನು ಮುಚ್ಚಲಾಗಿತ್ತು. ಆದರೆ ಇದೀಗ ಶ್ರೀನಿವಾಸ್ ಗೌಡ ಹೇಳಿಕೆ ಮೇಲೆ ಮತ್ತೆ ಪ್ರಕರಣ ಓಪನ್ ಆಗುವ ಸಾಧ್ಯತೆ ಇದೆ. 

ಆಪರೇಷನ್ ಕಮಲ ವಿಚಾರವಾಗಿ ಪದೇ ಪದೇ ಶಾಸಕ ಶ್ರೀನಿವಾಸ ಗೌಡ ಹೇಳಿಕೆ ಬದಲಾಯಿಸುತ್ತಿದ್ದು, ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ ಯಾವುದು ಸತ್ಯ. ಯಾವುದು ಸುಳ್ಳು ಅನ್ನುವುದು ಮಾತ್ರ ಇವರ ಹೇಳಿಕೆಯಿಂದ ಸ್ಪಷ್ಟವಾಗುತ್ತಿಲ್ಲ.