Asianet Suvarna News Asianet Suvarna News

ಕೋಲಾರ ದೇಶದಲ್ಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ: ಜಿಲ್ಲೆಯ ರಾಮಸಂದ್ರ ಗ್ರಾಮಕ್ಕೆ ವಿದೇಶಿಗರ ಭೇಟಿ

ದೇಶದಲ್ಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎನಿಸಿಕೊಂಡಿರುವ ಕೋಲಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ವಿದೇಶಿ ವಿದ್ಯಾರ್ಥಿಗಳು ಈ ಜಿಲ್ಲೆಗೆ ಭೇಟಿ ನೀಡಿ ಬಯಲುಮುಕ್ತ ವ್ಯವಸ್ಥೆಯನ್ನು ಪರಿಶೀಲಿಸಿದ್ರು.

Kolar is the first cleanthony district of India

ಕೋಲಾರ(ಅ.27): ದೇಶದಲ್ಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎನಿಸಿಕೊಂಡಿರುವ ಕೋಲಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ವಿದೇಶಿ ವಿದ್ಯಾರ್ಥಿಗಳು ಈ ಜಿಲ್ಲೆಗೆ ಭೇಟಿ ನೀಡಿ ಬಯಲುಮುಕ್ತ ವ್ಯವಸ್ಥೆಯನ್ನು ಪರಿಶೀಲಿಸಿದ್ರು.

ಕೋಲಾರ ತಾಲೂಕಿನ ಕೋಡಿ ರಾಮಸಂದ್ರ ಗ್ರಾಮಕ್ಕೆ ಭೇಟಿ ನೀಡಿದ 9 ದೇಶಗಳ 14 ಪ್ರತಿನಿಧಿಗಳು ಶೌಚಾಲಯ ನಿರ್ಮಾಣ ಪ್ರಗತಿ ಪರಿಶೀಲಿಸಿದ್ರು. ಹೈದರಾಬಾದ್​ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆಗೆ ಅಧ್ಯಯನಕ್ಕೆಂದು ಆಗಮಿಸಿದ್ದರು. ಕರ್ನಾಟಕದ ಕೋಲಾರ ದೇಶದಲ್ಲೇ ಬಯಲುಮುಕ್ತ ಜಿಲ್ಲೆ ಎಂಬ ಖ್ಯಾತಿ ಗಳಿಸಿದ್ದನ್ನು ಕೇಳಿ ಕೋಲಾರಕ್ಕೆ ಭೇಟಿ ನೀಡಿದ್ದರು.

ಸ್ವಚ್ಛ ಭಾರತ ಅಭಿಯಾನವು ಜಗತ್ತಿನ ಮುಂದುವರಿಯುತ್ತಿರುವ ದೇಶಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದೆ ಎಂದು  ಈ ತಂಡ ಅಭಿಪ್ರಾಯಪಟ್ಟಿತು.

Follow Us:
Download App:
  • android
  • ios