ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕುವಾಗ ಯಡವಟ್ಟು ಮಾಡಿಕೊಂಡು ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನಸೂರ್ ಜೆಡಿಎಸ್‌ಗೆ ಮತ ಹಾಕಿರಬಹುದು ಎನ್ನಲಾಗಿದೆ.

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕುವಾಗ ಯಡವಟ್ಟು ಮಾಡಿಕೊಂಡು ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನಸೂರ್ ಜೆಡಿಎಸ್‌ಗೆ ಮತ ಹಾಕಿರಬಹುದು ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್ ಬದಲು ಜೆಡಿಎಸ್‌ಗೆ ಮತ ಹಾಕಿರುವ ಹಿನ್ನೆಲೆಯಲ್ಲಿ ಇವರ ಮತಗಳನ್ನು ಹೇಗೆ ಪರಿಗಣಿಸಲಾಗುವುದು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಈ ಎರಡು ಮತಗಳು ತಿರಸ್ಕೃತವಾಗುವ ಸಾಧ್ಯತೆಯೂ ಇದೆ. 

ಈ ಹಿನ್ನೆಲೆಯಲ್ಲಿ ಜೆಡಿಎಸ್ ರೆಬೆಲ್ ಶಾಸಕರಾದ ಚೆಲುವರಾಯಸ್ವಾಮಿ ಹಾಗೂ ಎಚ್.ಸಿ. ಬಾಲಕೃಷ್ಣ ಅವರಿನ್ನೂ ಮತದಾನ ಮಾಡಿಲ್ಲ. ಕಾಂಗ್ರೆಸ್ ಏಜೆಂಟ್ ಪ್ರಕಾರ ಯಾರಿಗೆ ಮತ ಕಡಿಮೆಯಾಗುವುದೇ ಅವರಿಗೇ ಮತ ಹಾಕಿಸುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ.