ಬೆಳಗಾವಿ : ಲೋಕಸಭಾ ಚುನಾವಣಾ ನಂತರ ರಾಜ್ಯದಲ್ಲಿ ರಾಜಕೀಯದಲ್ಲಿ ಬದಲಾವಣೆ, ಧೃವಿಕರಣ ವಿಚಾರ ಭುಗಿಲೇಳುತ್ತಿವೆ. 

ಇತ್ತ ಮೈತ್ರಿ ಸರ್ಕಾರದ ಪತನ ಚರ್ಚೆಯಾಗುತ್ತಿದ್ದರೆ, ಅತ್ತ ಬಿಜೆಪಿ ಸರ್ಕಾರ ರಚನೆಯ ಬಗ್ಗೆ ಪ್ರಸ್ತಾಪ ಮಾಡುತ್ತಿದೆ. ಇದೇ ವೇಳೆ ಕೋಡಿ ಮಠದ ಸ್ವಾಮೀಜಿ ಯಾವುದೇ ಭವಿಷ್ಯ ಹೇಳುವುದಿಲ್ಲ ಎನ್ನುತ್ತಲೇ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,  ಸಮ್ಮಿಶ್ರ ಸರ್ಕಾರದ ಬಗ್ಗೆ ಈಗಾಗಲೇ ಹಲವು ಬಾರಿ ಮಾತನಾಡಿದ್ದೇನೆ. ಸದ್ಯ ರಾಜಕೀಯ ವಿಚಾರವಾಗಿ ಏನು ಮಾತನಾಡುವುದಿಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಮೇ 23ರವರೆಗೆ ಯಾವುದೇ ವಿಚಾರದ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಬರೆದುಕೊಟ್ಟಿರುವೆ. ಆದ್ದರಿಂದ ಏನು ಹೇಳುವುದಿಲ್ಲ ಎಂದಿದ್ದಾರೆ.

ಆದರೆ ರಾಜಕೀಯದಲ್ಲಿ ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಹೇಳಿದರು.