ದಾವಣಗೆರೆ [ಜು.1] : ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಅಲ್ಪಾಯುಷ್ಯವೆಂದು ಹೇಳುತ್ತಲೇ ಬಂದಿರುವ ಕೋಡಿಮಠದ ಸ್ವಾಮೀಜಿ ಇದೀ ಮತ್ತೊಮ್ಮೆ ಅದೇ ಭವಿಷ್ಯವನ್ನು ಪುನರುಚ್ಛರಿಸಿದ್ದಾರೆ.

ದಾವಣಗೆರೆಯಲ್ಲಿ ಹಾರನಹಳ್ಳಿ ಮತ್ತೊಮ್ಮೆ ಸರ್ಕಾರದ ಬಗ್ಗೆ ಹೇಳಿಕೆ ನೀಡಿದ್ದು, ಚುನಾವಣಾ ಪೂರ್ವದಲ್ಲಿ ಹೇಳಿದ್ದನ್ನು ಈಗಲೂ ಹೇಳುತ್ತೇನೆ. ಬಿತ್ತಿದ ಬೆಳಸು ಪರರು ಕೋಯ್ದಾರು. ಬಿತ್ತಿದ ಬೀಜ ಒಂದು ಫಸಲು ಇನ್ನೊಂದು. ಈ ಸರ್ಕಾರಕ್ಕೆ ಹೆಚ್ಚು ಆಯಸ್ಸು ಇಲ್ಲವೆಂದರು. 

ದೋಸ್ತಿಗೆ ಮರೆಯಾದ ಆನಂದ, ರಮೇಶ್ ಜಾರಕಿಹೊಳಿ ರಾಜೀನಾಮೆ

18 ತಿಂಗಳೊಳಗಾಗಿ ಮತವನ್ನು ಬೇಡುತ್ತಾರೆ ಎಂದು ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಿ, ಮಹತ್ತರ ಬದಲಾವಣೆಯಾಗುತ್ತದೆ ಎನ್ನುವುದನ್ನು ತಿಳಿಸಿದರು.

ಇನ್ನು ಮಳೆಯ ಬಗ್ಗೆಯೂ ಭವಿಷ್ಯ ನುಡಿದಿದ್ದು,  ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತದೆ. ಯಾವುದೇ ತೊಂದರೆ ಇಲ್ಲ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿಕೆ ನೀಡಿದರು.

ಅವರು ದಾವಣಗೆರೆಯಲ್ಲಿ ಪತ್ರಿಕಾ ದಿನಾಚರಣೆಗೆ ಆಗಮಿಸಿದ್ದಾಗ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್-ಜೆಡಿಎಸ್ ಸರಕಾರದ ಭವಿಷ್ಯದ ಬಗ್ಗೆ ಮಾತನಾಡಿದರು. 

"