ನವದೆಹಲಿ (ಜು. 01): ಸಂಸತ್‌ ಭವನಕ್ಕೆ ಸೈಕಲ್‌ನಲ್ಲಿ ತೆರಳುವ ಸಂಸದರ ಸಂಖ್ಯೆ ದಿಢೀರ್‌ ಹೆಚ್ಚಳವಾಗಿದೆ. ಇಷ್ಟುದಿನ ಇಬ್ಬರು-ಮೂವರು ಸಂಸದರು ಮಾತ್ರ ಸೈಕಲ್‌ನಲ್ಲಿ ಸಂಸತ್ತಿಗೆ ಬರುತ್ತಿದ್ದರು.

ಆದರೆ ಈಗ 25-30 ಸಂಸದರು ಸೈಕಲ್‌ನಲ್ಲಿ ಸಂಸತ್ತಿಗೆ ಬರತೊಡಗಿದ್ದು, ಅದಕ್ಕೆ ಪಾಸ್‌ ಕೂಡ ಕೇಳಿದ್ದಾರೆ. ಇದಕ್ಕೆ ಕಾರಣ ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಪ್ರಧಾನಿ ಮೋದಿ ಅವರು ಸೈಕಲ್‌ನಲ್ಲಿ ಬರುವ ಎಲ್ಲಾ ಮೂವರು ಸಂಸದರಿಗೆ ಮಂತ್ರಿ ಸ್ಥಾನ ನೀಡಿರುವುದು. ಸೈಕಲ್‌ನಲ್ಲಿ ಬಂದರೆ ಮೋದಿ ಮೆಚ್ಚಿಕೊಳ್ಳುತ್ತಾರೆ ಎಂದು ಭಾವಿಸಿರುವ ಸಂಸದರು, ಮುಂದಾದರೂ ತಮಗೆ ಸಚಿವ ಸ್ಥಾನ ನೀಡಲಿ ಎಂಬ ಉದ್ದೇಶದಿಂದ ಕಾರು ಬಿಟ್ಟು ಸೈಕಲ್‌ ಹತ್ತಿದ್ದಾರೆಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.