ಎಪಿಎಫ್ಒ  ಇಲಾಖೆಯು ಇದೀಗ ಪೆನ್ಶನ್  ಸಂಬಂಧಿಸಿದ ವಿಚಾರಗಳ ಮಾಹಿತಿ ಪಡೆಯುವುದನ್ನು ಹೆಚ್ಚು ಸುಲಭ ಮಾಡಿದೆ. 

ನವದೆಹಲಿ : ಎಪಿಎಫ್ಒ ಇಲಾಖೆಯು ಇದೀಗ ಪೆನ್ಶನ್ ಸಂಬಂಧಿಸಿದ ವಿಚಾರಗಳ ಮಾಹಿತಿ ಪಡೆಯುವುದನ್ನು ಹೆಚ್ಚು ಸುಲಭ ಮಾಡಿದೆ. ಈ ಸಂಬಂಧ ಮಾಹಿತಿ ಪಡೆದುಕೊಳ್ಳಲು ಹೊಸದಾದ ಪೋರ್ಟಲ್ ಒಂದನ್ನು ಆರಂಭ ಮಾಡಿದೆ. ಈ ಮೂಲಕ ನೀವು ನಿಮ್ಮ ಪೆನ್ಶನ್’ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ಪಡೆದುಕೊಳ್ಳಬಹುದಾಗಿದೆ.

https://mis.epfindia.gov.in/PensionPaymentEnquiryಇಲ್ಲಿಗೆ ಲಾಗಿನ್ ಆಗುವ ಮೂಲಕ ಪಿಂಚಣಿ ಸಂಖ್ಯೆ, ಮಾಹಿತಿಗಳು, ಪಿಂಚಣಿ ಪಾಸ್’ಬುಕ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ಕೂಡ ಇಲ್ಲಿಗೆ ಭೇಟಿ ನೀಡುವ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ.

ಕ್ರೆಡಿಟ್ ಆದ ಪಿಂಚಣಿ ಹಣದ ಮಾಹಿತಿ, ಅದಕ್ಕೆ ಸಂಬಂಧಿಸಿದ ಸರ್ಟಿಫಿಕೇಶನ್’ಗಳನ್ನೂ ಕೂಡ ಪಡೆಯಲು ಇಲ್ಲಿ ಅವಕಾಶವಿದೆ.