ಈ ಬಾರಿ ಒಟ್ಟು 1,099 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 846 ಪುರುಷರು, 253 ಮಹಿಳೆಯರು ಇದ್ದಾರೆ. ಜನರಲ್ ಕೆಟಗರಿಯಿಂದ 500, ಒಬಿಸಿಯಿಂದ 347, ಪರಿಶಿಷ್ಟ ಜಾತಿಯಿಂದ 163, ಪರಿಶಿಷ್ಟ ಪಂಗಡದಿಂದ 89 ಜನರು ತೇರ್ಗಡೆಯಾಗಿದ್ದಾರೆ.

ಬೆಂಗಳೂರು(ಜೂನ್ 05): ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ಎಷ್ಟು ಕಠಿಣ ಎಂಬುದಕ್ಕೆ ಈ ಬಾರಿಯ ಐಎಎಸ್ ಪರೀಕ್ಷೆ ಟಾಪರ್ಸ್ ಗಳಿಸಿದ ಅಂಕಗಳೇ ಕೈಗನ್ನಡಿಯಾಗಿವೆ. ಐಎಎಸ್'ನಲ್ಲಿ ಫಸ್ಟ್ ರ್ಯಾಂಕ್ ಗಳಿಸಿದ ಕನ್ನಡತಿ ಕೆಆರ್ ನಂದಿನಿ 55.3% ಪಡೆದಿದ್ದಾರೆ. ನಂದಿನಿ ಸೇರಿದಂತೆ ಸಿವಿಲ್ ಸರ್ವಿಸಸ್ ಪರೀಕ್ಷೆಗಳಲ್ಲಿ ಟಾಪ್ ಆದವರ ಅಂಕಗಳನ್ನು ಯುಪಿಎಸ್ಸಿ ಬಹಿರಂಗಪಡಿಸಿದೆ. ಪ್ರೀಲಿಮಿನರಿಯಲ್ಲಿ ತೇರ್ಗಡೆಯಾದ ನಂತರ ಮೈನ್ ಮತ್ತು ಇಂಟರ್'ವ್ಯೂ ಎಂಬ ಎರಡು ಹಂತಗಳಲ್ಲಿ ನಡೆಯುವ ಈ ಪರೀಕ್ಷೆಯಲ್ಲಿ ಒಟ್ಟು 2,025 ಅಂಕಗಳಿರುತ್ತವೆ. ಇದರಲ್ಲಿ ನಂದಿನಿ ಪಡೆದದ್ದು 1,120 ಅಂಕಗಳು. ಮೈನ್ ಮತ್ತು ಇಂಟರ್ವ್ಯೂ ಸುತ್ತಿನಲ್ಲಿ ನಂದಿನಿ ಪಡೆದದ್ದು 927 ಮತ್ತು 193 ಅಂಕಗಳನ್ನ.

Add Asianetnews Kannada as a Preferred SourcegooglePreferred

ಐಎಎಸ್ ಟಾಪರ್'ಗಳಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸಿದ್ದು ಅಭಿಷೇಕ್ ಶ್ರೀವಾಸ್ತವ. ಪರೀಕ್ಷೆಯಲ್ಲಿ ಯಶಸ್ವಿಯಾದ 1,099 ಅಭ್ಯರ್ಥಿಗಳ ಪೈಕಿ ಕೊನೆಯವರಾದ ಇವರು 40.34 ಪರ್ಸೆಂಟ್, ಅಂದರೆ 817 ಅಂಕಗಳನ್ನ ಪಡೆದಿದ್ದಾರೆ.

ಈ ಬಾರಿ ಒಟ್ಟು 1,099 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 846 ಪುರುಷರು, 253 ಮಹಿಳೆಯರು ಇದ್ದಾರೆ. ಜನರಲ್ ಕೆಟಗರಿಯಿಂದ 500, ಒಬಿಸಿಯಿಂದ 347, ಪರಿಶಿಷ್ಟ ಜಾತಿಯಿಂದ 163, ಪರಿಶಿಷ್ಟ ಪಂಗಡದಿಂದ 89 ಜನರು ತೇರ್ಗಡೆಯಾಗಿದ್ದಾರೆ.

ಟಾಪರ್ಸ್'ಗಳ ಅಂಕಪಟ್ಟಿ:

ಒಟ್ಟು ಅಂಕಗಳು: 2025

1) ನಂದಿನಿ ಕೆಆರ್: 1,120 (55.3%)
2) ಅನ್ಮೋನ್ ಶೇರ್ ಸಿಂಗ್ ಬೇಡಿ: 1,105 (54.37%)
3) ಗೋಪಾಲಕೃಷ್ಣ ರೋಣಂಕಿ: 1,101 (54.37%)

1,099) ಅಭಿಷೇಕ್ ಶ್ರೀವಾಸ್ತವ: 817 (40.34%)

2015ರ ಸಿವಿಲ್ ಸರ್ವಿಸಸ್ ಪರೀಕ್ಷೆಯ ಟಾಪರ್ ಆಗಿದ್ದ ಟೀನಾ ಡಾಬಿ ಅವರು 1,063 ಅಂಕ (52.49%) ಪಡೆದಿದ್ದರು.

ಸಿಎ, ಐಸಿಡಬ್ಲ್ಯೂಎಐಯಂತಹ ಪರೀಕ್ಷೆಗಳಂತೆಯೇ ನಾಗರಿಕ ಸೇವಾ ಪರೀಕ್ಷೆಗಳೂ ಕೂಡ ಅತ್ಯಂತ ಕಠಿಣ ಮೌಲ್ಯಮಾಪನ ಪ್ರಕ್ರಿಯೆ ಹೊಂದಿದೆ. ಅಂಕ ಗಳಿಸುವುದು ಅಷ್ಟು ಸುಲಭವಾಗಿಲ್ಲ ಎಂಬುದು ವೇದ್ಯವಾಗಿದೆ.