ದೆಹಲಿಯ ಅಧಿಕಾರದ ಗದ್ದುಗೆ ಯಾರ ಮುಡಿಗೆ?| ಮತ್ತೆ ದೆಹಲಿಯಲ್ಲಿ ಮೋದಿ ರಾರಾಜಿಸಲಿದ್ದಾರಾ?| ರಾಹುಲ್ ಗಾಂಧಿಗೇನಾದರೂ ಪ್ರಧಾನಿ ಕುರ್ಚಿ ಭಾಗ್ಯವಿದೆಯಾ?| ಸದ್ದಿಲ್ಲದೇ ಮೂರನೇ ವ್ಯಕ್ತಿಗೆ ಪ್ರಧಾನಿ ಕುರ್ಚಿ ಸಿಗಲಿದೆಯಾ?| ಅತಂತ್ರ ಲೋಕಸಭೆ ಸೃಷ್ಟಿಯಾದರೆ ಏನು ಮಾಡುವುದು?| ಅತಂತ್ರ ಲೋಕಸಭೆ ಸೃಷ್ಟಿಯಾದ ಇತಿಹಾಸ ನಮ್ಮ ಮುಂದಿದೆ|
ಬೆಂಗಳೂರು(ಮಾ.07): ಇನ್ನೇನು ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಲು ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಯಾರು ಈ ಬಾರಿ ಕೇಂದ್ರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದೇ ಇಡೀ ದೇಶದ ಜನರಲ್ಲಿರುವ ಒಂದೇ ಒಂದು ಪ್ರಶ್ನೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೇ?, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮಹಾಘಟಬಂಧನ್ ಅಧಿಕಾರಕ್ಕೇರುವುದೋ?, ಅಥವಾ ಈ ಇಬ್ಬರ ಅಬ್ಬರದ ಮಧ್ಯೆ ಮೂರನೇ ವ್ಯಕ್ತಿ ಸದ್ದಿಲ್ಲದೇ ಪ್ರಧಾನಿ ಕುರ್ಚಿ ಏರಬಹುದೇ ಎಂಬುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈ ಪ್ರಶ್ನೆಗಳಿಗೆಲ್ಲಾ ಇನ್ನೇನು ಕೆಲವೇ ತಿಂಗಳಲ್ಲಿ ಉತ್ತರ ಸಿಗಲಿದೆ. ಆದರೆ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಗೂ ಸಣ್ಣದೊಂದು ಆತಂಕ ಇದ್ದೇ ಇದೆ. ಒಂದು ವೇಳೆ ಅತಂತ್ರ ಲೋಕಸಭೆ ಸೃಷ್ಟಿಯಾದರೆ ಏನು ಮಾಡುವುದು ಎಂಬುದೇ ಆ ಆತಂಕವಾಗಿದೆ.
ಕಳೆದ ಜನೆವರಿಯಲ್ಲಿ ಇಂಡಿಯಾ ಟುಡೆ ನಡೆಸಿದ್ದ ಸಮೀಕ್ಷೆಯಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾಗುವ ಆತಂಕ ವ್ಯಕ್ತಪಡಿಸಿಲಾಗಿತ್ತು.
ಅತಂತ್ರ ಲೋಕಸಭೆ ಎಂದರೇನು?:
ಲೋಕಸಭೆಗೆ ಚುನಾವಣೆ ನಡೆದು ಯಾವೊಂದೂ ಪಕ್ಷ ಅಥವಾ ಮೈತ್ರಿಯೂ ಬಹುಮತ ಪಡೆಯದೇ ಹೋದರೆ ಅದನ್ನು ಅತಂತ್ರ ಲೋಕಸಭೆ ಎಂದು ಕರೆಯಲಾಗುವುದು.
ಎಲ್ಲರಿಗೂ ಗೊತ್ತಿರುವಂತೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಲೋಕಸಭೆಯ 545 ಸೀಟುಗಳ ಪೈಕಿ ಪಕ್ಷ ಅಥವಾ ಹಲವು ಪಕ್ಷಗಳ ಮೈತ್ರಿಗೆ 273 ಸದಸ್ಯ ಬಲ ಹೊಂದಿರಬೇಕು. ಇಲ್ಲವಾದಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾಗುತ್ತದೆ.
ಅದಾಗ್ಯೂ ಬಹುಮತಕ್ಕೆ ಸಮೀಪವಿರುವ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರವನ್ನು ರಚಿಸಬಹುದು. ಸಣ್ಣಪುಟ್ಟ ಪಕ್ಷಗಳು ಅಥವಾ ಪಕ್ಷೇತರ ಸದಸ್ಯರು ಈ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದಾಗ ರಾಷ್ಟ್ರಪತಿ ಸರ್ಕಾರ ರಚನೆಗೆ ಅವಕಾಶ ನೀಡುತ್ತಾರೆ.
ರಾಷ್ಟ್ರಪತಿ ಪಾತ್ರ:
ಅತಂತ್ರ ಲೋಕಸಭೆ ಸೃಷ್ಟಿಯಾದಾಗ ರಾಷ್ಟ್ರಪತಿಯ ಪಾತ್ರ ಬಹಳ ಮುಖ್ಯವಾಗುತ್ತದೆ. ಮೊದಲು ರಾಷ್ಟ್ರಪತಿ ಅಧಿಕ ಸೀಟು ಗಳಿಸಿದ ರಾಜಕೀಯ ಪಕ್ಷದ ನೇತಾರನನ್ನು ಕರೆದು ಸರ್ಕಾರ ರಚನೆಗೆ ಅವಕಾಶ ಕೊಡುತ್ತಾರೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದಲ್ಲಿ ಆವಾಗ ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಪಕ್ಷದ ನೇತಾರನನ್ನು ಕೆದು ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲಾಗುವುದು.
ಇದಾದ ಬಳಿಕ ಅತಿ ದೊಡ್ಡ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸದನದಲ್ಲಿ ಬಹುಮತ ಸಾಬೀತು ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಇದಾದ ಬಳಿಕವೂ ಸರ್ಕಾರ ನಡೆಸಲು ವಿಫಲವಾದರೆ ಲೋಕಸಭೆಯನ್ನು ವಿಸರ್ಜಿಸಿ ಮತ್ತೆ ಹೊಸದಾಗಿ ಚುನಾವಣೆ ನಡೆಸಲಾಗುತ್ತದೆ. ಅಲ್ಲದೇ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯೆತಯೂ ಇಲ್ಲದ್ದಿಲ್ಲ.
ಅತಂತ್ರ ಲೋಕಸಭೆ ಸೃಷ್ಟಿಯಾದ ಇತಿಹಾಸ:
1989, 1990, 1996 ರಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾದ ಇತಿಹಾಸವಿದೆ.
1996: ಈ ಅವಧಿಯಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 161, ಕಾಂಗ್ರೆಸ್ 140 ಹಾಗೂ ಜನತಾದಳ 40 ಸೀಟುಗಳನ್ನು ಗಳಿಸಿದ್ದವು. ಸಹಜವಾಗಿ ರಾಷ್ಟ್ರಪತಿ ಬಿಜೆಒಪಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಬಹುಮತ ಗಳಿಸುವಲ್ಲಿ ವಿಫಲರಾದ ಪರಿಣಾಮ ಕಾಂಗ್ರೆಸ್ ಹಾಗೂ ಜನತಾದಳ ಸೇರಿ ಸರ್ಕಾರ ರಚಿಸಿದವು. ಕರ್ನಾಟಕದ ಹೆಚ್.ಡಿ.ದೇವೇಗೌಡ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ಆದರೆ ಈ ಸರ್ಕಾರ ಕೇವಲ 18 ತಿಂಗಳಲ್ಲಿ ಬಿದ್ದು ಹೋಯಿತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 11, 2019, 11:44 AM IST