ಬೆಂಗಳೂರು [ಜು.31]:  ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ನಡೆಸಬೇಕಾಗಿದ್ದ ಚುನಾವಣೆಯನ್ನು ಮುಂದೂಡಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಕರ್ನಾಟಕ ಹಾಲು ಮಹಾ ಮಂಡಳ ಅಧ್ಯಕ್ಷ ಸ್ಥಾನದ ಚುನಾ ವಣೆಯನ್ನು ಮುಂದೂಡಿ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೊರಡಿಸಿರುವ ಆದೇಶ ರದ್ದುಪಡಿಸ ಬೇಕು ಮತ್ತು ಯಾವ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ಸ್ಥಗಿತ ಗೊಂಡಿತ್ತೋ ಅಲ್ಲಿಂದಲೇ ಮುಂದುವರಿಸು ವಂತೆ ನಿರ್ದೇಶಿಸಬೇಕು ರೇವಣ್ಣ ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿಯಲ್ಲಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಹಕಾರ ಸಂಘಗಳ ರಿಜಿಸ್ಟ್ರಾರ್, ಚುನಾವಣಾಧಿಕಾರಿಯಾದ ಪ್ರಾದೇಶಿಕ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಇಲಾ ಖೆಗಳ ಅಧಿಕಾರಿಗಳನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ವಿಚಾರಣೆಗೆ ಬರಬೇಕಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿ, ಅದರನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ವೇಳಾಪಟ್ಟಿಯ ಅನ್ವಯ 2019 ರ ಜುಲೈ 29 ರಂದು ಚುನಾವಣೆ ನಡೆಯಬೇಕಿತ್ತು.  ಆದರೆ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯು ಚುನಾವಣೆಯನ್ನು ಮುಂದೂಡಿ ಜುಲೈ 29 ರಂದೇ ಆದೇಶ ಹೊರಡಿಸಿದ್ದಾರೆ. ಆದರೆ ಈ ರೀತಿ ಆದೇಶ ಹೊರಡಿಸಲು ಯಾವುದೇ ಅಧಿಕಾರ ಇಲ್ಲ. ಅಧ್ಯಕ್ಷ ಹುದ್ದೆಗೆ ತಾವೊಬ್ಬರೇ ಅರ್ಜಿ ಸಲ್ಲಿಸಿದ್ದು, ತಮ್ಮನ್ನೇ ಅಧ್ಯಕ್ಷರಾಗಿ ಆಯ್ಕೆಯಾ ಗುವ ಸಾಧ್ಯತೆ ಇತ್ತು. ತಾವು ಅಧ್ಯಕ್ಷರಾಗಿ ಆಯ್ಕೆಯಾಗುವು ದನ್ನು ತಪ್ಪಿಸುವ ದುರುದ್ದೇಶ ದಿಂದ ಚುನಾವಣೆಯನ್ನು ಮುಂದೂಡಿ ಆದೇಶಿಸಲಾಗಿದೆ ಎಂದು ರೇವಣ್ಣ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಅಲ್ಲದೆ, ಒಮ್ಮೆ ವೇಳಾಪಟ್ಟಿ ಘೋಷಣೆ ಯಾದ ನಂತರ ಚುನಾವಣೆಯನ್ನು ಮುಂದೂಡಲು ಕಾನೂನಿನಲ್ಲಿ ಅವಕಾಶವಿಲ್ಲ. ಚುನಾವಣೆ ಮುಂದೂಡಲು ಸಕಾರಣಗಳನ್ನು ನೀಡಿಲ್ಲ.ಆದ್ದರಿಂದ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆಯ ಬೇಕಿದ್ದ ಚುನಾವಣೆಯನ್ನು ಮುಂದೂಡಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು.

ಸ್ಥಗಿತಗೊಂಡಿರುವ ಹಂತದಿಂದಲೇ ಚುನಾ ವಣಾ ಪ್ರಕ್ರಿಯೆ ಮುಂದುವರಿಸುವಂತೆ ಚುನಾವಣಾಧಿಕಾರಿಗೆ ನಿರ್ದೇಶಿಸ ಬೇಕು ಎಂದು ಅರ್ಜಿಯಲ್ಲಿ ಮುಖ್ಯವಾಗಿ ಮನವಿ ಮಾಡಲಾಗಿದೆ. ಚುನಾವಣೆಯನ್ನು ಮುಂದೂಡಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಜು.29 ರಂದು ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಿ, ಚುನಾವಣೆ ನಡೆ ಸಲುಅನುಮತಿ ನೀಡಬೇಕೆಂದು ಅರ್ಜಿಯಲ್ಲಿಮಧ್ಯಂತರ ಮನವಿ ಮಾಡಲಾಗಿದೆ. 

ಎ. ಮಂಜು ಅವರನ್ನು ಅಧ್ಯಕ್ಷ ಹುದ್ದೆಗೆ ನಿಲ್ಲಿಸಲು ಬಿಜೆಪಿ ಪ್ಲಾನ್ ಮಾಡುತ್ತಿದೆ ಎನ್ನುವ ಮಾತುಗಳೂ ಕೇಳಿ ಬಂದಿದ್ದು, ಇದರಿಂದ ಚುನಾವಣೆ ಮುಂದೂಡಲಾಗಿದೆ ಎನ್ನುವ ಆಕ್ರೀಶ ವ್ಯಕ್ತವಾಗಿದೆ.