Asianet Suvarna News Asianet Suvarna News

ಕಿರಿಯ ಸಂಪಾದಕ ಸ್ಪರ್ಧೆ: ಮಕ್ಕಳ ಬರವಣಿಗೆ ಕಂಡು ಅಚ್ಚರಿಪಟ್ಟ ನಟ ರಮೇಶ್ ಅರವಿಂದ್

ರಾಜ್ಯದ 20 ಜಿಲ್ಲೆಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 1606 ಶಾಲೆಯ ಎರಡೂವರೆ ಲಕ್ಷ ಮಕ್ಕಳು ಭಾಗವಹಿಸಿದ್ದಾರೆ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತರಲು ಪ್ರಾರಂಭಗೊಂಡಿದ್ದ  ಈ ಸ್ಪರ್ಧೆ ಈಗ ಅಂತಿಮ ಘಟ್ಟ ತಲುಪಿದ್ದು, ತೀರ್ಪುಗಾರರಾದ ನಟ ರಮೇಶ್​ ಅರವಿಂದ್​, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್​, ಕೆಎಂ​ಎಫ್​ ಮಾರ್ಕೆಟಿಂಗ್ ಮುಖ್ಯಸ್ಥ​ ಮೃತುಂಜ್ಯಯ ಕುಲಕರ್ಣಿ, ವಿಜಯ ಶಾಲಿ ಮಕ್ಕಳ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದಾರೆ.

Kiriya Sampadaka Results To Be Announced Soon

ಬೆಂಗಳೂರು (ಫೆ.18): ಕಳೆದ ಮೂರು ತಿಂಗಳುಗಳಿಂದ ಕನ್ನಡಪ್ರಭ, ಸುವರ್ಣನ್ಯೂಸ್ ನಡೆಸುತ್ತಿರುವ ನಂದಿನಿ ಕನ್ನಡಪ್ರಭ ಕಿರಿಯ ಸಂಪಾದಕ ಸ್ಪರ್ಧೆ ಇದೀಗ ಅಂತಿಮ ಘಟ್ಟ ತಲುಪಿದೆ.

ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತರಲು ಉತ್ತಮ ವೇದಿಕೆ ನೀಡಿದ ಕನ್ನಡ ಪ್ರಭ, ಸುವರ್ಣನ್ಯೂಸ್ ಈಗ ವಿಜೇತರ ಹೆಸರು ಘೋಷಿಸಲು  ಸಿದ್ಧತೆ ನಡೆಸುತ್ತಿದೆ.

ಕನ್ನಡಪ್ರಭ ದಿನಪ್ರತಿಕೆ ಮತ್ತು ನಂದಿನಿ ಹಾಲು ಒಕ್ಕೂಟ ಸಹಯೋಗದೊಂದಿಗೆ  ನವೆಂಬರ್​ 15 ರಂದು ನಂದಿನಿ ಕನ್ನಡಪ್ರಭ ಕಿರಿಯ ಸಂಪಾದಕ ಸ್ಪರ್ಧೆ ಆರಂಭಗೊಂಡಿತ್ತು.

ರಾಜ್ಯದ 20 ಜಿಲ್ಲೆಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 1606 ಶಾಲೆಯ ಎರಡೂವರೆ ಲಕ್ಷ ಮಕ್ಕಳು ಭಾಗವಹಿಸಿದ್ದಾರೆ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತರಲು ಪ್ರಾರಂಭಗೊಂಡಿದ್ದ  ಈ ಸ್ಪರ್ಧೆ ಈಗ ಅಂತಿಮ ಘಟ್ಟ ತಲುಪಿದ್ದು, ತೀರ್ಪುಗಾರರಾದ ನಟ ರಮೇಶ್​ ಅರವಿಂದ್​, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್​, ಕೆಎಂ​ಎಫ್​ ಮಾರ್ಕೆಟಿಂಗ್ ಮುಖ್ಯಸ್ಥ​ ಮೃತುಂಜ್ಯಯ ಕುಲಕರ್ಣಿ, ವಿಜಯ ಶಾಲಿ ಮಕ್ಕಳ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದಾರೆ.

ಮೊದಲು ಪ್ರತಿ ಜಿಲ್ಲೆಯಿಂದ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ 60 ಜನ ವಿದ್ಯಾರ್ಥಿಗಳಲ್ಲಿ ಮೂವರನ್ನು ವಿಜೇತರೆಂದು ಫೋಷಣೆ ಮಾಡಲಾಗುವುದು. ಈಗಾಗಲೇ ತೀರ್ಪುಗಾರರು ವಿದ್ಯಾರ್ಥಿಗಳು ಬರೆದು ಕಳಿಸಿರುವ ಪ್ರತಿಕೆಯನ್ನು ಪರಿಶೀಲಿಸುತ್ತಿದ್ದು, ಫೆಬ್ರವರಿ 26 ರಂದು ವಿಜೇತರಿಗೆ ಬಹುಮಾನ ನೀಡಲಾಗುವುದು.

ರಮೇಶ್ ಅರವಿಂದ ಅಚ್ಚರಿ:

ಶಾಲಾ ವಿದ್ಯಾರ್ಥಿಗಳೇ ರಚಿಸಿರುವ  ಪ್ರತಿಕೆಗಳನ್ನು ನೋಡಿದ  ನಟ ರಮೇಶ್ ಅರವಿಂದ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 14 ವರ್ಷದ ಮಕ್ಕಳು ಇಷ್ಟು ಚೆನ್ನಾಗಿ ಬರೆಯುತ್ತಾರೆ ಎಂಬುದನ್ನು ಮನಗಂಡ ನಟ ರಮೇಶ್, ಮಕ್ಕಳ ಬರವಣಿಗೆಗೆ ಫಿದಾ ಆಗಿದ್ದಾರೆ.

ವರದಿ: ಮುತ್ತಪ್ಪ ಲಮಾಣಿ, ಬೆಂಗಳೂರು

Follow Us:
Download App:
  • android
  • ios