ನಾಳೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್​'ನಲ್ಲಿ ಭಾಗವಹಿಸಲಿರುವ ಈ ಕಿನ್ನರ ಜೋಗಿಗಳು ಕನ್ನಡಿಗರ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಎನ್ ದೇವರಹಳ್ಳಿಯಲ್ಲಿ ವಾಸವಾಗಿರುವ ಈ ಕಿನ್ನರ ಜೋಗಿಗಳ ಸಮುದಾಯದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ಚಿತ್ರದುರ್ಗ(ಜ.25): ತಂಬೂರಿ ಹಿಡಿದುಕೊಂಡು ಮನೆ ಮನೆಗೂ ಬಂದು ಮಹಾಭಾರತದ ಕಥೆಗಳನ್ನು ಹೇಳುತ್ತಾ ಭೀಕ್ಷೆ ಬೇಡುತ್ತಿದ್ದ ಕಿನ್ನರ ಜೋಗಿಗಳು, ಕರ್ನಾಟಕದ ಜನಪದ ಶೈಲಿಯನ್ನು ನಾಳೆ ಇಡೀ ದೇಶಕ್ಕೇ ಪರಿಚಯಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಳೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್​'ನಲ್ಲಿ ಭಾಗವಹಿಸಲಿರುವ ಈ ಕಿನ್ನರ ಜೋಗಿಗಳು ಕನ್ನಡಿಗರ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಎನ್ ದೇವರಹಳ್ಳಿಯಲ್ಲಿ ವಾಸವಾಗಿರುವ ಈ ಕಿನ್ನರ ಜೋಗಿಗಳ ಸಮುದಾಯದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ಆಕರ್ಷಕ ವೇಷ ಭೂಷಣ ಧರಿಸಿಕೊಂಡು, ಅಲೆಮಾರಿಗಳಂತೆ ಬದುಕುವ ಇವರು ಈಗ ದೆಹಲಿ ಪರೇಡ್​'ನಲ್ಲಿ ಭಾಗಿಯಾಗಲಿದ್ದಾರೆ. ಇಂತಹ ಸುವರ್ಣ ಅವಕಾಶ ಸಿಕ್ಕಿರುವುದರಿಮದ ಇಡೀ ಹಾಡಿಯಲ್ಲಿ ಸಂಭ್ರಮ ಮನೆ ಮಾಡಿದೆ.