ದುಬೈ[ಏ.29]: ಭಾರತದ ಹಿಂದೂ ಪ್ರಜೆ ಹಾಗೂ ಮುಸ್ಲಿಂ ಮಹಿಳೆಯಿಂದ ಜನ್ಮ ಪಡೆದ 9 ತಿಂಗಳ ಹೆಣ್ಣು ಮಗುವಿಗೆ ಅರಬ್‌ ಸಂಯುಕ್ತ ರಾಷ್ಟ್ರಗಳ ಸರ್ಕಾರವು ಜನ್ಮ ದಿನದ ಪ್ರಮಾಣ ಪತ್ರ ನೀಡಿದೆ. ಅರಬ್‌ ರಾಷ್ಟ್ರದ ಇತಿಹಾಸದಲ್ಲೇ ಹಿಂದು ವ್ಯಕ್ತಿ ಹಾಗೂ ಮುಸ್ಲಿಂ ಮಹಿಳೆಗೆ ಜನಿಸಿದ ಮಗುವಿನ ಜನ್ಮ ಪ್ರಮಾಣ ಪತ್ರ ನೀಡಿದ ಮೊದಲ ಪ್ರಸಂಗ ಇದಾಗಿರಬಹುದು ಎಂದು ಹೇಳಲಾಗಿದೆ.

ಅರಬ್‌ ರಾಷ್ಟ್ರದ ವಲಸಿಗರ ಮದುವೆ ನಿಯಮಗಳ ಪ್ರಕಾರ ಮುಸ್ಲಿಂ ವ್ಯಕ್ತಿಯೋರ್ವ ಇತರೆ ಧರ್ಮದ ಮಹಿಳೆಯನ್ನು ವಿವಾಹವಾಗಬಹುದು. ಆದರೆ, ಮುಸ್ಲಿಂ ಮಹಿಳೆಯೊಬ್ಬರು ಮುಸ್ಲಿಮೇತರ ವ್ಯಕ್ತಿಯನ್ನು ವಿವಾಹವಾಗುವಂತಿಲ್ಲ.

ಆದರೆ, 2016ರಲ್ಲಿ ಕೇರಳದಲ್ಲಿ ವಿವಾಹವಾಗಿದ್ದ ಶಾರ್ಜಾ ಮೂಲದ ಕಿರಣ್‌ ಬಾಬು ಹಾಗೂ ಸನಂ ಸಾಬು ಸಿದ್ದಿಕ್‌ ದಂಪತಿಗೆ ಅರಬ್‌ನಲ್ಲಿ 2018ರ ಜುಲೈನಲ್ಲಿ ಹೆಣ್ಣು ಮಗು ಜನಿಸಿತ್ತು. ಹೀಗಾಗಿ, ಈ ದಂಪತಿ ಅರಬ್‌ನಲ್ಲಿ ವಿಚಿತ್ರ ಸನ್ನಿವೇಶಕ್ಕೆ ತುತ್ತಾಗಿದ್ದರು.