ಅಧಿಕಾರ ನೀಡಿದ, ರಾಜಕೀಯವಾಗಿ ಬೆಳೆಸಿದ ಪಕ್ಷದ ಬಗ್ಗೆ ಹಗರುವಾಗಿ ಮಾತನಾಡುವುದು ಸರಿಯಲ್ಲ; ಪಕ್ಷಕ್ಕೆ ಯಾರಿಂದ ಒಳ್ಳೆಯದಾಗುವುದೋ ಅವರನ್ನು ಇಟ್ಟುಕೊಳ್ಳಲು ಪಕ್ಷ ಎಲ್ಲಾ ಪ್ರಯತ್ನ ಮಾಡುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಕಲಬುರಗಿ (ಫೆ.17): ಮುಖಂಡರು ಪಕ್ಷ ತೊರೆಯುತ್ತಿರುವ ಕುರಿತು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನನ್ನಿಂದಲೇ ಪಕ್ಷ ಅನ್ನೋ ಭಾವನೆ ಯಾರಲ್ಲೂ ಇರಬಾರದು, ಪಕ್ಷದಿಂದ ಎಲ್ಲಾ ಸಹಾಯ ಪಡೆದುಕೊಂಡವರು ಪಕ್ಷದ ಬಗ್ಗೆ ವಿಚಾರ ಮಾಡಬೇಕು, ಇದುವರೆಗೆ ಏನಾದರೂ ಆಗಿದ್ರೆ ಅದು ಪಕ್ಷದಿಂದ ಮತ್ತು ಜನರಿಂದ ಅನ್ನೋದನ್ನು ಮರೆಯಬಾರದು ಎಂದು ಖರ್ಗೆ ಹೇಳಿದ್ದಾರೆ.
ಅಧಿಕಾರ ನೀಡಿದ, ರಾಜಕೀಯವಾಗಿ ಬೆಳೆಸಿದ ಪಕ್ಷದ ಬಗ್ಗೆ ಹಗರುವಾಗಿ ಮಾತನಾಡುವುದು ಸರಿಯಲ್ಲ; ಪಕ್ಷಕ್ಕೆ ಯಾರಿಂದ ಒಳ್ಳೆಯದಾಗುವುದೋ ಅವರನ್ನು ಇಟ್ಟುಕೊಳ್ಳಲು ಪಕ್ಷ ಎಲ್ಲಾ ಪ್ರಯತ್ನ ಮಾಡುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಆಂತರಿಕ ಕಚ್ಚಾಟ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ದುಡಿಯಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.