ಬೆಂಗಳೂರು(ಜು.30): ವಿಟಮಿನ್ ಎ ಮತ್ತು ವಿಟಮಿನ್ ಡಿ ಒಳಗೊಂಡಂತಹ ನಂದಿನಿ ಹಾಲು ಇನ್ನು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ನಂದಿನ ಹಾಲಿನಲ್ಲಿ ವಿಟಮಿನ್ ಎ ಹಾಗೂ ಡಿ ಇರಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.  ಕೆಎಂಎಫ್, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ಟಾಟಾ ಟ್ರಸ್ಟ್ ಸಹಯೋಗದಲ್ಲಿ ವಿಟಮಿನ್ ಕೂಡಿದ ಹಾಲು ಮಾರುಕಟ್ಟೆಗೆ ಬರುತ್ತಿದೆ.

ಹಾಲಿನ ದರದಲ್ಲಿ ವ್ಯತ್ಯಾಸವಿಲ್ಲ:

ಜಯದೇವ ಅಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಅವರು ವಿಟಮಿನ್ ಒಳಗೊಂಡ ನಂದಿನಿ ಹಾಲನ್ನು ಬಿಡುಗಡೆ ಮಾಡಿದ್ದಾರೆ. ಈಗಿನ ನಂದಿನಿ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ವಿಟಮಿನ್ ಯುಕ್ತ ಹಾಲು ಮಾರುಕಟ್ಟೆಗೆ ಬಿಡಲಾಗುತ್ತಿದ್ದು, ವಿಟಮಿನ್ ಸಾರವರ್ಧನೆಗೆ ಒಂದು ಪ್ಯಾಕೆಟ್‌ಗೆ‌ ಮೂರರಿಂದ ನಾಲ್ಕು ಪೈಸೆ ಹೆಚ್ಚುವರಿ ಹೊರೆಯಾಗತ್ತದೆ.

ಕಣ್ಣಿನ ದೃಷ್ಟಿ ಸುಧಾರಿಸುತ್ತದೆ:

ಆದರೆ ಜನರಿಗೆ ಹೊರೆಯಾಗದಂತೆ ಮೊದಲಿನ ದರದಲ್ಲೇ ವಿಟಮಿನ್ ಸಾರವರ್ಧನೆಯ ಹಾಲು ಲಭ್ಯವಾಗಲಿದೆ. ವಿಟಮಿನ್ ಎ ಕೊರತೆ ಇಂದ ಇರುಳುಗಣ್ಣು ಉಂಟಾಗುತ್ತದೆ, ಆದರೆ ವಿಟಮಿನ್ ಎ ಇಂದ ಕೂಡಿದ‌ ನಂದಿನಿ ಹಾಲು ಸೇವನೆ ಇಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

ನಂದಿನಿಯಲ್ಲಿನ್ನು ಸಿಗುತ್ತೆ ದೇಸಿ ತಳಿ ಹಾಲು : ದರವೆಷ್ಟು..?

ಸಿರಿಧಾನ್ಯ ಲಡ್ಡು ಸೇರಿ ಹಲವು ಉತ್ಪನ್ನ ಮಾರುಕಟ್ಟೆಗೆ:

ವಿಟಮಿನ್ ಡಿ ಇಂದ ಕೂಡಿದ ನಂದಿನಿ‌ ಹಾಲು ಸೇವನೆ ಇಂದ ಮೂಳೆ ಹಾಗೂ ಕೀಲುಗಳ ಸಮಸ್ಯೆ ‌ಸುಧಾರಿಸುತ್ತದೆ. ವಿಟಮಿನ್ ಸಾರವರ್ಧನೆಯ ಜೊತೆ ಸಿರಿಧಾನ್ಯ ಲಡ್ಡು, ಹಾಗೂ ಸಿರಿಧಾನ್ಯ ಶಕ್ತಿ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ