ರಾಯಪುರದಲ್ಲಿ ಚಿರತೆ ಮರಿಯೊಂದನ್ನು ದತ್ತು ಪಡೆದಿದ್ದು, ಮುಂದಿನ ತಿಂಗಳು ಹೊಸ ಅತಿಥಿಯನ್ನು ಭೇಟಿ ಮಾಡುವುದಾಗಿ ಕೆಪಿ ತಿಳಿಸಿದ್ದಾರೆ. ಅಲ್ಲದೇ ಚಿರತೆ ಮರಿಗೆ ಏನೆಂದು ಹೆಸರಿಡಲಿ ಎಂದು ಅಭಿಮಾನಿಗಳ ಬಳಿ ಸಲಹೆ ಕೇಳಿದ್ದಾರೆ.

ರಾಯಪುರ(ಫೆ.19):ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್'ಸನ್ ಭಾರತದಲ್ಲಿ ಅನಾಥ ಚಿರತೆ ಮರಿಯನ್ನು ದತ್ತುಪಡೆಯುವ ಮೂಲಕ ಭಾರತೀಯ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ರಾಯಪುರದಲ್ಲಿ ಚಿರತೆ ಮರಿಯೊಂದನ್ನು ದತ್ತು ಪಡೆದಿದ್ದು, ಮುಂದಿನ ತಿಂಗಳು ಹೊಸ ಅತಿಥಿಯನ್ನು ಭೇಟಿ ಮಾಡುವುದಾಗಿ ಕೆಪಿ ತಿಳಿಸಿದ್ದಾರೆ. ಅಲ್ಲದೇ ಚಿರತೆ ಮರಿಗೆ ಏನೆಂದು ಹೆಸರಿಡಲಿ ಎಂದು ಅಭಿಮಾನಿಗಳ ಬಳಿ ಸಲಹೆ ಕೇಳಿದ್ದಾರೆ.

ಕಳೆದ ಜನವರಿಯೊಂದರಲ್ಲೇ ಭಾರತದಲ್ಲಿ ಸುಮಾರು 40 ಚಿರತೆಗಳನ್ನು ಸಾಯಿಸಲಾಗಿತ್ತು. ಅದರಲ್ಲಿ 1/3ರಷ್ಟು ಚಿರತೆಗಳನ್ನು ಕಳ್ಳಬೇಟೆಗಾರರು ಚಿರತೆಗಳನ್ನು ಸಾಯಿಸಿದ್ದು ಕೆಲವಾರಗಳ ಹಿಂದಷ್ಟೇ ಪೀಟರ್'ಸನ್ ಗಮನಕ್ಕೆ ಬಂದಿದೆ. ಆ ಬಳಿಕ ಚಿರತೆಗಳನ್ನು ಉಳಿಸಲು ಚಿರತೆ ಮರಿಯನ್ನು ದತ್ತು ಪಡೆದಿರುವುದಾಗಿ ಪೀಟರ್'ಸನ್ ಇನ್'ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

View post on Instagram