ಕರ್ನಾಟಕ ಜನತೆಗೆ ವಿದ್ಯುತ್ ಶಾಕ್

First Published 14, May 2018, 1:32 PM IST
KERC announce power tariff hike
Highlights

ಕರ್ನಾಟಕದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ  ಜನರಿಗೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಶಾಕ್ ನೀಡಿದೆ. ವಿದ್ಯುತ್ ದರದಲ್ಲಿ ಕೊಂಚ ಏರಿಕೆ ಮಾಡಿ ಪರಿಷ್ಕೃತ ದರ ಪ್ರಕಟ ಮಾಡಿದೆ. ವಿದ್ಯುತ್ ದರದಲ್ಲಿ ಸರಾಸರಿ 5.93ರಷ್ಟು ಏರಿಕೆ ಕಂಡು ಬಂದಿದೆ. ಕನಿಷ್ಟ 20 ಪೈಸೆಯಷ್ಟು, ಗರಿಷ್ಟ 60 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. 

ಬೆಂಗಳೂರು (ಮೇ 14)  : ಕರ್ನಾಟಕದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ  ಜನರಿಗೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಶಾಕ್ ನೀಡಿದೆ. ವಿದ್ಯುತ್ ದರದಲ್ಲಿ ಕೊಂಚ ಏರಿಕೆ ಮಾಡಿ ಪರಿಷ್ಕೃತ ದರ ಪ್ರಕಟ ಮಾಡಿದೆ. ವಿದ್ಯುತ್ ದರದಲ್ಲಿ ಸರಾಸರಿ 5.93ರಷ್ಟು ಏರಿಕೆ ಕಂಡು ಬಂದಿದೆ. ಕನಿಷ್ಟ 20 ಪೈಸೆಯಷ್ಟು, ಗರಿಷ್ಟ 60 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. 

ನೂತನ ದರವನ್ನು ಕೆಇಆರ್ ಸಿ ಅಧ್ಯಕ್ಷ ಶಂಕರಲಿಂಗೇಗೌಡ ಪ್ರಕಟ ಮಾಡಿದ್ದು, ಏಪ್ರಿಲ್ ತಿಂಗಳಿನಿಂದಲೇ ಪರಿಷ್ಕೃತ ದರವು ಪೂರ್ವಾನ್ವಯವಾಗಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷದ ವಿದ್ಯುತ್ ದರವನ್ನು ಗರಿಷ್ಠ 48 ಪೈಸೆಯಷ್ಟು ಏರಿಕೆ ಮಾಡಲಾಗಿತ್ತು. 

ನೀರು ಪೂರೈಕೆ ಮಾಡುವವರಿಗೂ 15 ಪೈಸೆ , ಸ್ಟ್ರೀಟ್ ಲೈಟ್ ಗೆ ಇದುವರೆಗೆ ಯಾವ ದರವಿತ್ತೋ ಅದೇ ದರ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಇನ್ನು 21,500 ಮಿಲಿಯನ್ ಯುನಿಟ್ ಅಗ್ರಿಕಲ್ಚರ್ ಬಳಕೆಗೆ 11ಸಾವಿರ ಕೋಟಿ ಸಬ್ಸಿಡಿ ಸರ್ಕಾರದಿಂದ ಬರಬೇಕಿದೆ.  8 ಸಾವಿರ ಕೋಟಿಯಷ್ಟು ಮಾತ್ರ ಇದುವರೆಗೆ ಬಿಡುಗಡೆಯಾಗಿದೆ ಎಂದು ಶಂಕರಲಿಂಗೇಗೌಡ ಹೇಳಿದ್ದಾರೆ. 

ವಿದ್ಯುತ್ ದರದಲ್ಲಿ ಜನಪರವಾದ ಕೆಲವು ನಿರ್ಧಾರ :  ಬಿಎಂಆರ್‌ಸಿಎಲ್‌ಗೆ 6ರು. ದರ ನಿಗದಿ ಮಾಡಲಾಗಿದೆ.  ಪ್ರತೀ ಯೂನಿಟ್ ಗೆ 1ರು. ಹೆಚ್ಚಳ ಮಾಡಲಾಗಿದೆ. ರಾತ್ರಿ ವೇಳೆ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ವಿದ್ಯುತ್ ಬಳಸುವವರಿಗ ಪ್ರತಿ ಯೂನಿಟ್ ’ಗೆ 2 ರೂಪಾಯಿ ರಿಯಾಯಿತಿ ನೀಡಲಾಗಿದೆ. ಇನ್ನು  ಗೃಹಬಳಕೆ ಗ್ರಾಹಕರಿಗೆ  ಪ್ರತಿ ಯೂನಿಟ್ ಗೆ ಸರಾಸರಿ 25 ಪೈಸೆ ಹೆಚ್ಚಳ ಮಾಡಲಾಗಿದೆ. 
 
ಎಲ್ ಟಿ ಕೈಗಾರಿಕಾ ಬಳಕೆದಾರರಿಗೆ ಪ್ರತಿ ಯೂನಿಟ್ ಗೆ 20 ರಿಂದ 25 ಪೈಸೆ ಯಷ್ಟು ಹೆಚ್ಚಳ ಮಾಡಲಾಗಿದೆ.  ರೈತರಿಗೆ ಹಗಲು ಮೂರು ಗಂಟೆ ಮತ್ತು ರಾತ್ರಿ 3 ಗಂಟೆ ವಿದ್ಯುತ್ ಮಾಡಲಾಗುತ್ತದೆ.  ಒಟ್ಟು 6 ಗಂಟೆ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಿದ್ದು,  ಅಕ್ಟೋಬರ್ ತಿಂಗಳವರೆಗೆ ಈ ನಿಯಮ ಅನ್ವಯವಾಗಲಿದೆ.  ಇನ್ನು  ಗ್ರಾಮ ಪಂಚಾಯತಿ ಬಳಕೆದಾರರಿಗೂ ಶೇ. 25ರಷ್ಟು,  ಇಂಡಸ್ಟ್ರಿಗೆ 20-25ಪೈಸೆ ಹೆಚ್ಚಳ ಮಾಡಲಾಗುತ್ತದೆ. 

loader