ಪ್ರಿಯಕರನ ಜನನಾಂಗ ಕಟ್ ಮಾಡಿದ ಪ್ರಯತಮೆ! ಕೋಪಕ್ಕೆ ಕಾರಣವೇನು ಗೊತ್ತೆ ?

ಆತನಿಗೆ 26 ವರ್ಷ, ಆಕೆಗೋ 30 ವರ್ಷ. ಇಬ್ಬರಿಗೂ ಲವ್ ಆಗಿದೆ. ಇಬ್ಬರೂ ಹಲವು ದಿನಗಳಿಂದ ಒಟ್ಟಿಗೆ ಸುತ್ತಾಡಿಕೊಂಡು ಲವ್ವಿಡವ್ವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಡುವೆ ಹುಡುಗನ ಮನೆಯವರು ಆತನಿಗೆ ಬೇರೆಡೆ ಮದುವೆಗೆ ಸಿದ್ಧತೆ ಮಾಡಿದ್ದರು. ವಿಷಯ ಪ್ರಿಯತಮೆ ಕಿವಿಗೆ ಬಿದ್ದಿದೆ. ಸುಮ್ಮನೆ ಬಿಟ್ಟರೆ ಹಕ್ಕಿ ಕೈಬಿಟ್ಟು ಹೋದೀತು ಎಂದು ಅರಿತ ಆಕೆ, ಪ್ರಿಯಕರನನ್ನು ಹೋಟೆಲ್‌ಗೆ ಬರಹೇಳಿದ್ದಾಳೆ. ಹೀಗೆ ಬಂದವನಿಗೆ ಏನಪ್ಪಾ ವಿಷಯ. ನನ್ನನ್ನು ಬಿಟ್ಟು ಬೇರೆ ಮದುವೆ ಆಗುತ್ತಿದ್ದೆಯಂತೆ ಎಂದು ಕೇಳಿದ್ದಾಳೆ. ಆತ ಹೌದು ಎಂದಿದ್ದಾನೆ. ಸಿಟ್ಟಿಗೆದ್ದ ಆಕೆ ಚಾಕುವಿನಿಂದ ಆತನ ಮರ್ಮಾಂಗ ಕತ್ತರಿಸಿದ್ದಾಳೆ. ಚೀರಾಟ ಕೇಳಿದ ಹೋಟೆಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಿಯತಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಂತೆ.