Asianet Suvarna News Asianet Suvarna News

ಸೋಲಾರ್ ಹಗರಣ: ಸರಿತಾ ನಾಯರ್ ಮತ್ತು ಬಿಜು ರಾಧಾಕೃಷ್ಣರಿಗೆ 3 ವರ್ಷ ಜೈಲುಶಿಕ್ಷೆ

ಸೋಲಾರ್ ಹಗರಣದ ಆರೋಪಿಗಳಾಗಿದ್ದ ಸರಿತಾ ಎಸ್ ನಾಯರ್ ಮತ್ತು ಬಿಜು ರಾಧಾಕೃಷ್ಣರಿಗೆ ಜಿಲ್ಲಾ ನ್ಯಾಯಾಲಯ 3 ವರ್ಷ ಜೈಲುಶಿಕ್ಷೆ, 10 ಸಾವಿರ ದಂಡವನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟಿ ಶಾಲೂ ಮೆನನ್ ಮತ್ತು ಆಕೆಯ ತಾಯಿಯನ್ನು ಖುಲಾಸೆಗೊಳಿಸಲಾಗಿದೆ.

Kerala solar scam Saritha Nair Biju Radhakrishanan get three years in jail

ಕೊಚ್ಚಿ (ಡಿ.16): ಸೋಲಾರ್ ಹಗರಣದ ಆರೋಪಿಗಳಾಗಿದ್ದ ಸರಿತಾ ಎಸ್ ನಾಯರ್ ಮತ್ತು ಬಿಜು ರಾಧಾಕೃಷ್ಣರಿಗೆ ಜಿಲ್ಲಾ ನ್ಯಾಯಾಲಯ 3 ವರ್ಷ ಜೈಲುಶಿಕ್ಷೆ, 10 ಸಾವಿರ ದಂಡವನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟಿ ಶಾಲೂ ಮೆನನ್ ಮತ್ತು ಆಕೆಯ ತಾಯಿಯನ್ನು ಖುಲಾಸೆಗೊಳಿಸಲಾಗಿದೆ.

ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಕೆಲವು ಪ್ರಮುಖ ಉದ್ಯಮಿಗಳ ಹೆಸರು ಈ ಹಗರಣದಲ್ಲಿ ಕೇಳಿ ಬಂದಿತ್ತು.

ಪೆರುಂಬವೂರ್ ನಿವಾಸಿ ಸಜ್ಜದ್ ಎನ್ನುವವರು ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಪೋಲಿಸರು ಈಗಾಗಲೇ ಸರಿತಾರನ್ನು ಬಂಧಿಸಿದ್ದಾರೆ. ಇವರ ಮೇಲೆ ಸಾಕಷ್ಟು ಆರೋಪಗಳಿವೆ ಎಂದು ದೂರಿನಲ್ಲಿ ದಾಖಲಿಸಿದ್ದರು. 

ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಸರಿತಾ ಮತ್ತು ರಾದಾಕೃಷ್ಟನ್ ಪರಮಾಪ್ತರೆನ್ನುವ ವಿಚಾರ ರಾಜಕೀಯ ಮಹತ್ವವನ್ನು ಪಡೆದಿತ್ತು. ವಿಚಾರಣೆ ನಡೆಸಿದ ಪೆರುಂಬವೂರ್ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ?

2003 ರಲ್ಲಿ ಟೀಮ್ ಸೋಲಾರ್ ಎಂಬ ಹೆಸರಿನ ನಕಲಿ ಕಂಪನಿ ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಕೇರಳ ರಾಜ್ಯದಲ್ಲಿ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗೆ ಮುಂದಾಗಿತ್ತು. ಈ ಮಹಿಳೆಯರು ಅಂದಿನ ಮುಖ್ಯಮಂತ್ರಿ ಓಮನ್ ಚಾಂಡಿ ಅವರ ಆಪ್ತ ಸಿಬ್ಬಂದಿ ಜತೆ ಸಂಪರ್ಕ ಸಾಧಿಸಿ, 70 ಮಿಲಿಯನ್ ಮೊತ್ತದ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದರು. ಈ ನಕಲಿ ಕಂಪನಿಯ ನಿರ್ದೇಶಕರಾಗಿದ್ದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ನಾಯರ್ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಪಾಲುದಾರಿಕೆ ಆಮಿಷ ಒಡ್ಡಿದ್ದರು. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಚಾಂಡಿ ಅವರ ಆಪ್ತ ಟೆನ್ನಿ ಎಂಬಾತನನ್ನು ಬಂಧಿಸಲಾಗಿತ್ತು. 

Follow Us:
Download App:
  • android
  • ios