ಬಂಧಿತರಾಗಿ ಜೈಲು ಸೇರಿದ್ದ ಶಶಿಕಲಾಗೆ ಇದೀಗ ಬೇಲ್ ಸಿಕ್ಕು ಬಿಡುಗಡೆಯಾಗಿದ್ದು ಶಬರಿಮಲೆ ದೇಗುಲ ಪ್ರವೇಶಕ್ಕೆ ಅನುಮತಿ ದೊರೆತಿದೆ. 

ತಿರುವನಂತಪುರ : ಅಯ್ಯಪ್ಪ ದರ್ಶನಕ್ಕೆ ತೆರಳುವಾಗ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಹಿಂದೂ ಐಕ್ಯ ವೇದಿ ಮುಖ್ಯಸ್ಥೆ ಶಶಿಕಲಾ ಟೀಚರ್ ಗೆ ಇದೀಗ ಅಯ್ಯಪ್ಪನ ದರ್ಶನ ಪಡೆಯಲು ಅನುಮತಿ ನೀಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ರಾತ್ರಿ ಅಯ್ಯಪ್ಪ ದೇಗುಲಕ್ಕೆ ತೆರಳುತ್ತಿದ್ದ ಅವರನ್ನು ರಾತ್ರಿ ವೇಳೆ ಬಂಧನಕ್ಕೆ ಒಳಪಡಿಸಲಾಗಿತ್ತು. ಇದೀಗ ಪೊಲೀಸರ ವಶದಲ್ಲಿದ್ದ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿದ್ದು, ದರ್ಶನಕ್ಕೆ ಅವಕಾಶ ನೀಡಲಾಗಿದೆ. 

ಶಶಿಕಲಾ ಟೀಚರ್ ಬಂಧನವಾಗುತ್ತಿದ್ದಂತೆ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುದಿದ್ದು, ಈ ನಿಟ್ಟಿನಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ 6 ಗಂಟೆಗಳ ಒಳಗೆ ಅಯ್ಯಪ್ಪ ದರ್ಶನ ಪಡೆಯಲು ಷರತ್ತನ್ನೂ ಕೂಡ ವಿಧಿಸಲಾಗಿದೆ. 

ಕಳೆದ ಬಾರಿ ನೇಕ ಮಹಿಳೆಯರು ದೇಗುಲವನ್ನು ಪ್ರವೇಶಿಸಲು ಯತ್ನಿಸಿದ್ದರು. ಅಲ್ಲದೇ ಈ ವೇಳೆ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆದು ಪ್ರವೇಶಿಸುವ ಯತ್ನ ವಿಫಲವಾಗಿತ್ತು.

ರಾತ್ರೋ ರಾತ್ರಿ ಶಬರಿಮಲೆಗೆ ಬಂದ ಮಹಿಳೆ ಅರೆಸ್ಟ್ : ಯಾರಾಕೆ..?