ತನ್ನ ಕೋಮುವಾದಿ ಪಠ್ಯಕ್ರಮದಿಂದ ಕುಖ್ಯಾತವಾಗಿದ್ದ ಕೊಚ್ಚಿಯ ‘ಪೀಸ್ ಇಂಟರ್‌ನ್ಯಾಷನಲ್ ಸ್ಕೂಲ್’ ಅನ್ನು ಮುಚ್ಚಲು ಕೇರಳ ಸರ್ಕಾರ ಆದೇಶಿಸಿದೆ. ಈ ಶಿಕ್ಷಣ ಸಂಸ್ಥೆ, ಸಿಬಿಎಸ್‌ಇ, ಎನ್‌ಸಿಇಆರ್‌ಟಿ ಅಥವಾ ಕೇರಳ ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರಲಿಲ್ಲ. ಬದಲಿಗೆ ಮುಂಬೈ ಮೂಲದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯ ಪಠ್ಯಕ್ರಮ ಅನುಸರಿಸಿತ್ತು.

ಕೊಚ್ಚಿ: ತನ್ನ ಕೋಮುವಾದಿ ಪಠ್ಯಕ್ರಮದಿಂದ ಕುಖ್ಯಾತವಾಗಿದ್ದ ಕೊಚ್ಚಿಯ ‘ಪೀಸ್ ಇಂಟರ್‌ನ್ಯಾಷನಲ್ ಸ್ಕೂಲ್’ ಅನ್ನು ಮುಚ್ಚಲು ಕೇರಳ ಸರ್ಕಾರ ಆದೇಶಿಸಿದೆ. ಈ ಶಿಕ್ಷಣ ಸಂಸ್ಥೆ, ಸಿಬಿಎಸ್‌ಇ, ಎನ್‌ಸಿಇಆರ್‌ಟಿ ಅಥವಾ ಕೇರಳ ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರಲಿಲ್ಲ. ಬದಲಿಗೆ ಮುಂಬೈ ಮೂಲದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯ ಪಠ್ಯಕ್ರಮ ಅನುಸರಿಸಿತ್ತು.

2016ರಲ್ಲಿ 21 ಶಂಕಿತ ಉಗ್ರರು ಐಸಿಸ್ ಸೇರಲು ದೇಶಬಿಟ್ಟಾಗ, ನಾಪತ್ತೆಯಾದ ಕೆಲವರು ಮಲಪ್ಪುರಂ, ಕೊಚ್ಚಿ ಮತ್ತು ಕಾಸರಗೋಡಿನ ಪೀಸ್ ಶಾಲೆಗಳೊಂದಿಗೆ ನಂಟು ಹೊಂದಿದ್ದುದು ಬೆಳಕಿಗೆ ಬಂದಿತ್ತು.ಬಳಿಕ ಶಾಲಾ ಪಠ್ಯಕ್ರಮದಲ್ಲಿ ಅನ್ಯಧರ್ಮ ದ್ವೇಷಬಿತ್ತುವ ಅಂಶಗಳಿದ್ದುದು ಪತ್ತೆಯಾಗಿತ್ತು.

ಪುಸ್ತಕದಲ್ಲಿ ಇಸ್ಲಾಮ್ ಬಗ್ಗೆ ಪ್ರಚಾರ ಮಾಡುವ ಮತ್ತು ಮುಸ್ಲಿಮೇತರ ರೊಂದಿಗೆ ಹೇಗೆ ವರ್ತಿಸಬೇಕೆಂಬ ಮಾಹಿತಿಗಳಿದ್ದವು. ತಮ್ಮ ಸ್ನೇಹಿತರು ಮುಸ್ಲಿಮರಾಗಲು ಬಯಸಿದರೆ ನೀವು ಏನು ಮಾಡುತ್ತೀರಿ?, ಇಸ್ಲಾಂ ಯಾಕೆ ಯಾವಾಗಲೂ ಗೆಲ್ಲುತ್ತದೆ? ಎಂಬಂತಹ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಲಾಗಿತ್ತು.