ಚರ್ಚ್‌ಗಳಿಗೆ ಪುರುಷರ ವಸ್ತ್ರಗಳನ್ನು ಧರಿಸಿಕೊಂಡು ಬರುವ ಮತ್ತು ದೇಹ ಪ್ರದರ್ಶಿಸುವ ಮಹಿಳೆಯರ ದೇಹಕ್ಕೆ ಕಲ್ಲು ಕಟ್ಟಿ ಸಮುದ್ರದಲ್ಲಿ ಮುಳುಗಿಸಬೇಕು ಎಂದು ಪಾದ್ರಿ ಹೇಳಿದ್ದರು. ಶಲೋಂ ಟಿವಿಯ ಮೂಲದ ಈ ವೀಡಿಯೊ ಕಳೆದ ಶನಿವಾರ ಪ್ರಕಟಿಸಲಾಗಿದೆ. ಪಾದ್ರಿ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ತಿರುವನಂತಪುರ(ಫೆ.27): ಜೀನ್ಸ್, ಟಿ-ಶರ್ಟ್ ಸೇರಿದಂತೆ ಪುರುಷರ ಬಟ್ಟೆಗಳನ್ನು ಧರಿಸುವ ಮಹಿಳೆಯರನ್ನು ಸಮುದ್ರದಲ್ಲಿ ಮುಳುಗಿಸಬೇಕು ಎಂದು ಕೇರಳದ ಧಾರ್ಮಿಕ ಗುರುವೊಬ್ಬರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾದ್ರಿಯೊಬ್ಬರು ಈ ರೀತಿಯಾಗಿ ಮಾತನಾಡುವ ವೀಡಿಯೊ ಒಂದನ್ನು ಜಾಸ್ಮಿನ್ ಪಿಕೆ ಎಂಬವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ಅದು ಈಗ ವೈರಲ್ ಆಗಿದೆ. ಚರ್ಚ್‌ಗಳಿಗೆ ಪುರುಷರ ವಸ್ತ್ರಗಳನ್ನು ಧರಿಸಿಕೊಂಡು ಬರುವ ಮತ್ತು ದೇಹ ಪ್ರದರ್ಶಿಸುವ ಮಹಿಳೆಯರ ದೇಹಕ್ಕೆ ಕಲ್ಲು ಕಟ್ಟಿ ಸಮುದ್ರದಲ್ಲಿ ಮುಳುಗಿಸಬೇಕು ಎಂದು ಪಾದ್ರಿ ಹೇಳಿದ್ದರು. ಶಲೋಂ ಟಿವಿಯ ಮೂಲದ ಈ ವೀಡಿಯೊ ಕಳೆದ ಶನಿವಾರ ಪ್ರಕಟಿಸಲಾಗಿದೆ. ಪಾದ್ರಿ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.