ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪಕ್ಷದಿಂದ ಶಾಸಕರೊಬ್ಬರನ್ನ ಆರು ತಿಂಗಳ ಅಮಾನತು ಮಾಡಲಾಗಿದೆ.

ತಿರುವನಂತಪುರಂ, (ನ.26): ಕೇರಳದ ಶೋರನೂರು ಶಾಸಕ ಪಿಕೆ ಶಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹಿನ್ನಲೆಯಲ್ಲಿ ಸಿಪಿಎಂ ಪಕ್ಷದಿಂದ ಶಾಸಕ ಪಿಕೆ ಶಶಿ ಅವರನ್ನ ಅಮಾನತು ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಡೆಮಾಕ್ರಾಟಿಕ್ ಯೂಥ್ ಫೆಡೆರೇಷನ್ ಆಫ್ ಇಂಡಿಯಾ (ಡಿಎಫ್ ವೈಐ)ನ ಮಹಿಳಾ ಸದಸ್ಯೆಯೊಬ್ಬರು, ತಮಗಾದ ನೋವನ್ನು ಪತ್ರದ ಮೂಲಕ ತೋಡಿಕೊಂಡಿದ್ದರು.

ಈ ಕುರಿತಂತೆ ತನಿಖೆ ನಡೆಸಿದ್ದು, ಪ್ರಾಥಮಿಕ ಸದಸ್ಯತ್ವದಿಂದ ಆರು ತಿಂಗಳು ಕಾಲ ಸಸ್ಪೆಂಡ್ ಮಾಡಿ ಇಂದು (ಸೋಮವಾರ) ಸಿಪಿಐಎಂ ಪಕ್ಷ ಆದೇಶ ಹೊರಡಿಸಿದೆ.

ಕಳೆದ ಒಂದು ವರ್ಷದಿಂದ ಕಿರುಕುಳ ಅನುಭವಿಸುತ್ತಿದ್ದೇನೆ, ಈ ಬಗ್ಗೆ ಅನೇಕ ಹಿರಿಯ ನಾಯಕರಿಗೆ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಿಳೆ ಪತ್ರ ಬರೆದಿದ್ದರು.

ಕಳೆದ ಆಗಸ್ಟ್ ತಿಂಗಳಿನಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಗೆ ಪತ್ರ ತಲುಪಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ನಂತರ ಮಾರ್ಕ್ಸ್ ವಾಗಿ ಪಕ್ಷದ ಹಿರಿಯ ನಾಯಕಿ ಬೃಂದಾ ಕಾರಟ್ ಹಾಗೂ ಸೀತಾರಾಮ್ ಯೆಚೂರಿಗೂ ಪತ್ರ ಕಳಿಸಲಾಗಿತ್ತು.