ತಿರುವನಂತಪುರಂ (ಆ.03): ಐಎಎಸ್​ ಅಧಿಕಾರಿಯೋಬ್ಬರ ಕಾರಿಗೆ ಪತ್ರಕರ್ತ ಬಲಿಯಾದ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ಮಲೆಯಾಳಂ ದಿನಪತ್ರಿಕೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಕೆ.ಎಂ.ಬಶೀರ್ (35) ಅಪಘಾತದಲ್ಲಿ ಮೃತ ದುರ್ದವೈ. ಐಎಎಸ್ ಅಧಿಕಾರಿ ಶ್ರೀರಾಂ ವೆಂಕಟರಾಮನ್ ಅವರು ಶುಕ್ರವಾರ ತಡರಾತ್ರಿ ಕುಡಿದ ಮತ್ತಿನಲ್ಲಿ ಕಾರು ವೇಗವಾಗಿ ಚಾಲನೆ ಮಾಡಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಈ ಬಗ್ಗೆ  ಪೊಲೀಸರು ಮಾಹಿತಿ ನೀಡಿದ್ದು. ಕಾರಿನಲ್ಲಿ ಓರ್ವ ಮಹಿಳೆ ಕೂಡ ಇದ್ದರು. ಆದರೆ, ಅಪಘಾತದ ಬಗ್ಗೆ ಅವರು ಹಲವು ಗೊಂದಲಮಯ ಹೇಳಿಕೆಗಳನ್ನು ನೀಡಿದ್ದಾರೆ.  ಕಡೆಗೆ ಹೆಸರು ಹೇಳಲು ಇಚ್ಛಿಸದ ಕೆಲವರು ನೀಡಿದ ಮಾಹಿತಿಯಿಂದ ಶ್ರೀರಾಮ್​ ಅವರೇ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಶ್ರೀರಾಮ್​ ಅವರು ಮದ್ಯ ಸೇವಿಸಿದ್ದರಾ ಎಂಬ ಪರೀಕ್ಷೆ ನಡೆಸುವುದಕ್ಕೋಸ್ಕರ ಅವರ ರಕ್ತದ ಮಾದರಿ ತೆಗೆದುಕೊಳ್ಳಲು ಪ್ರಯತ್ನಿಸಲಾಯಿತು. ಆದರೆ, ಅವರು ಮೊದಲು ರಕ್ತ ಕೊಡಲು ನಿರಾಕರಿಸಿದರು.

 ಯಾರಾದರೂ ರಕ್ತ ಮಾದರಿ ನೀಡಲು ಹೀಗೆ ನಿರಾಕರಿಸಿದರೆ ನಂತರ ಕಾನೂನು ಪ್ರಕ್ರಿಯೆ ನಡೆಸಲಾಗುತ್ತದೆ. ಅವರನ್ನು ಬಂಧಿಸಿ, ಸರ್ಕಾರಿ ಆಸ್ಪತ್ರೆ ವೈದ್ಯರಿಂದ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಶ್ರೀರಾಮ್​ ಅವರು ಕೊನೆಗೆ ರಕ್ತ ಪರೀಕ್ಷೆಗೆ ಒಳಗಾದರು. ಅವರು ಮದ್ಯ ಸೇವಿಸಿದ್ದರು ಎಂಬುದು ಪ್ರಾಥಮಿಕ ವೈದ್ಯಕೀಯ ವರದಿಯಲ್ಲೇ ಪತ್ತೆಯಾಗಿದೆ ಎಂದು ತಿರುವನಂತಪುರ ಪೊಲೀಸ್​ ವರಿಷ್ಠಾಧಿಕಾರಿ ಧಿನೇಂದ್ರ ಕಶ್ಯಪ್​ ಮಾಹಿತಿ ನೀಡಿದ್ದಾರೆ.

ಇದೇ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ