18 ವರ್ಷದ ಹುಡುಗ ಹಾಗೂ 19 ವರ್ಷದ ಯುವತಿಯ ಲಿವ್‌-ಇನ್‌ ಸಂಬಂಧ (ವಿವಾಹವಾಗದೇ ಇದ್ದರೂ ಕೂಡಿಬಾಳುವುದು)ಕ್ಕೆ ಅವಕಾಶ ಕಲ್ಪಿಸುವ ಮೂಲಕ ಕೇರಳ ಹೈಕೋರ್ಟ್‌ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದೇ ವೇಳೆ, ಲಿವ್‌-ಇನ್‌ ಸಂಬಂಧದ ವಿಚಾರದಲ್ಲಿ ನ್ಯಾಯಾಲಯ ಕಣ್ಣು ಮುಚ್ಚಿ ಕೂರಲು ಆಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. 

ಕೊಚ್ಚಿ (ಜೂ. 02): 18 ವರ್ಷದ ಹುಡುಗ ಹಾಗೂ 19 ವರ್ಷದ ಯುವತಿಯ ಲಿವ್‌-ಇನ್‌ ಸಂಬಂಧ (ವಿವಾಹವಾಗದೇ ಇದ್ದರೂ ಕೂಡಿಬಾಳುವುದು)ಕ್ಕೆ ಅವಕಾಶ ಕಲ್ಪಿಸುವ ಮೂಲಕ ಕೇರಳ ಹೈಕೋರ್ಟ್‌ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದೇ ವೇಳೆ, ಲಿವ್‌-ಇನ್‌ ಸಂಬಂಧದ ವಿಚಾರದಲ್ಲಿ ನ್ಯಾಯಾಲಯ ಕಣ್ಣು ಮುಚ್ಚಿ ಕೂರಲು ಆಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ವಿವಾಹಕ್ಕೆ ನಿಗದಿಯಾಗಿರುವ ಕಾನೂನುಬದ್ಧ ವಯೋಮಿತಿಯನ್ನು ತಲುಪದೇ ಇದ್ದರೂ, ಅವಿವಾಹಿತ ವಯಸ್ಕ ಜೋಡಿ ಒಟ್ಟಿಗೆ ಬಾಳಬಹುದು (ಲಿವ್‌- ಇನ್‌) ಎಂದು ಕೆಲವು ತಿಂಗಳ ಹಿಂದೆ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ಕೇರಳ ಹೈಕೋರ್ಟ್‌ ಇಂತಹದ್ದೊಂದು ಸಂಬಂಧಕ್ಕೆ ಅಂಗೀಕಾರ ಒತ್ತಿದೆ.

ಈ ಸಂಬಂಧ ಪ್ರಶ್ನಿಸಿ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ವಿ. ಚಿತಂಬರೇಶ್‌ ಹಾಗೂ ಕೆ.ಪಿ. ಜ್ಯೋತಿಂದ್ರನಾಥ್‌ ಅವರಿದ್ದ ಪೀಠ, ಇಬ್ಬರೂ ವಯಸ್ಕರಾಗಿದ್ದು, ಅವರನ್ನು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಕೆ ಮೂಲಕ ಪ್ರತ್ಯೇಕಿಸಲಾಗದು ಎಂದು ಹೇಳಿದೆ. ಯುವಕನ ಜತೆ ಯುವತಿ ಬಾಳಲು ಮುಕ್ತ ಅವಕಾಶ ಹೊಂದಿದ್ದಾಳೆ. ವಿವಾಹ ವಯಸ್ಸು ತಲುಪಿದ ಬಳಿಕ ಆಕೆ ಆತನನ್ನು ವಿವಾಹವಾಗಲೂಬಹುದು ಎಂದು ತಿಳಿಸಿದೆ.