ತಿರುವನಂತಪುರಂ: ಪ್ರವಾಹದಿಂದ ತತ್ತರಿಸಿರುವ ಕೇರಳ ಈಗ ಪರಿಹಾರ ಕಾರ್ಯಕ್ಕಾಗಿ ವಿವಿಧ ವಿದೇಶಿ ಬ್ಯಾಂಕ್‌ಗಳ ನೆರವು ಪಡೆಯಲು ಚಿಂತಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶ್ವಬ್ಯಾಂಕ್ ಜೊತೆ ಸರ್ಕಾರ ಪ್ರಸ್ತಾಪ ಮಂಡಿಸಿದ್ದು, ಎಷ್ಟು ಮೊತ್ತದ ಸಾಲ ನಿರೀಕ್ಷಿಸಲಾಗಿದೆ ಗೊತ್ತಾಗಿಲ್ಲ. 

ವಿಶ್ವಬ್ಯಾಂಕ್ ಕೂಡ ಆಸಕ್ತಿ ತೋರಿದ್ದು, ತನ್ನ ಪ್ರತಿನಿಧಿ ಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಗೆ ಕಳುಹಿಸಿಕೊಟ್ಟಿದೆ. ಇತ್ತೀಚೆಗೆ ಕೇರಳದ ವಿದೇಶಿ ನೆರವಿನ ಬೇಡಿಕೆಗೆ ಕೇಂದ್ರ ನಿರಾಕರಿಸಿದ್ದು ಇಲ್ಲಿ ಗಮನಾರ್ಹ. 

1200 ಕೋಟಿ ರು. ವಿಮಾ ಕ್ಲೇಮ್ ಸಲ್ಲಿಕೆ: ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ವಿಮೆ ಹಣಕ್ಕಾಗಿ ಅರ್ಜಿ ಸಲ್ಲಿಸುವವ ಸಂಖ್ಯೆ ಹೆಚ್ಚಾಗತೊಡಗಿದೆ. ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ವಿಮಾ ಕಂಪೆನಿಗಳಲ್ಲಿ ಈಗ 1200 ಕೋಟಿ ರು. ಮೌಲ್ಯದ 11,000 ಕ್ಲೇಮ್‌ಗಳು ಸಲ್ಲಿಕೆಯಾಗಿ