ಕೇರಳದಲ್ಲಿ ಪ್ರತಿ ವರ್ಷ 6500 ಕೋಟಿ ರು. ಮೌಲ್ಯದ 2.5 ಲಕ್ಷ ಟನ್‌ ಗೋಮಾಂಸವನ್ನು ಸೇವಿಸಲಾಗುತ್ತದೆ. ಕೇರಳದಲ್ಲಿ ಮಾರಾಟವಾ ಗುವ ಎಲ್ಲ ಮಾಂಸಗಳಿಗೆ ಹೋಲಿಸಿದರೆ ಗೋಮಾಂಸದ ಪಾಲು ಶೇ.60. ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟುಜನರು ಗೋಮಾಂಸ ತಿನ್ನುತ್ತಾರೆ. ಇದಕ್ಕೆ ಬೇಕಾದ ಗೋವು, ಎಮ್ಮೆಗಳಿಗಾಗಿ ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇ ಶದ ಮೇಲೆ ಕೇರಳ ಸಂಪೂರ್ಣ ಅವಲಂಬನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಮೇ 23ರಂದು ಸುತ್ತೋಲೆ ಹೊರಡಿಸಿದ ಬಳಿಕ ಆ ರಾಜ್ಯಗಳಿಂದ ಗೋವುಗಳು ಕೇರಳಕ್ಕೆ ಬರುತ್ತಿಲ್ಲ.

ತಿರುವನಂತಪುರ/ಪಣಜಿ: ಜಾನುವಾರು ಸಂತೆಗಳಿಂದ ಮಾಂಸದ ಉದ್ದೇಶಕ್ಕಾಗಿ ಪ್ರಾಣಿಗಳನ್ನು ಖರೀದಿಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಸುತ್ತೋಲೆ ಹೊರಬಿದ್ದ ಹತ್ತೇ ದಿನದಲ್ಲಿ ಕೇರಳ ಹಾಗೂ ಗೋವಾ ಮೇಲೆ ಭಾರಿ ಪರಿಣಾಮ ಉಂಟಾಗಿದೆ. ಗೋಮಾಂಸಕ್ಕಾಗಿ ಕರ್ನಾಟಕದಂತಹ ರಾಜ್ಯಗಳ ಮೇಲೆ ಅವಲಂಬನೆಯಾಗಿರುವ ಈ ಎರಡೂ ರಾಜ್ಯಗಳಲ್ಲಿ ಗೋವು, ಎಮ್ಮೆ ಮಾಂಸಕ್ಕೆ ಬರ ಕಾಡಲು ಆರಂಭಿಸಿದ್ದು, ಬೆಲೆ ಏರುತ್ತಿದೆ.

ಕೇರಳದಲ್ಲಿ ಪ್ರತಿ ವರ್ಷ 6500 ಕೋಟಿ ರು. ಮೌಲ್ಯದ 2.5 ಲಕ್ಷ ಟನ್‌ ಗೋಮಾಂಸವನ್ನು ಸೇವಿಸಲಾಗುತ್ತದೆ. ಕೇರಳದಲ್ಲಿ ಮಾರಾಟವಾ ಗುವ ಎಲ್ಲ ಮಾಂಸಗಳಿಗೆ ಹೋಲಿಸಿದರೆ ಗೋಮಾಂಸದ ಪಾಲು ಶೇ.60. ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟುಜನರು ಗೋಮಾಂಸ ತಿನ್ನುತ್ತಾರೆ. ಇದಕ್ಕೆ ಬೇಕಾದ ಗೋವು, ಎಮ್ಮೆಗಳಿಗಾಗಿ ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇ ಶದ ಮೇಲೆ ಕೇರಳ ಸಂಪೂರ್ಣ ಅವಲಂಬನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಮೇ 23ರಂದು ಸುತ್ತೋಲೆ ಹೊರಡಿಸಿದ ಬಳಿಕ ಆ ರಾಜ್ಯಗಳಿಂದ ಗೋವುಗಳು ಕೇರಳಕ್ಕೆ ಬರುತ್ತಿಲ್ಲ.

ಗೋರಕ್ಷಕರು ದಾಳಿ ಮಾಡಬಹುದು ಎಂಬ ಭೀತಿಯಿಂದಾಗಿ ವಾಹನ ಚಾಲಕರು ಗೋವುಗಳನ್ನು ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವಾರವಷ್ಟೇ 5 ಲಾರಿಗಳಲ್ಲಿ ಸಾಗಿಸುತ್ತಿದ್ದ ಗೋವುಗಳಿಗೆ ಕನ್ಯಾಕುಮಾರಿ ಹಾಗೂ ಪೊಲ್ಲಾಚಿಯಲ್ಲಿ ಹಿಂದು ಸಂಘಟನೆಗಳು ತಡೆಯೊಡ್ಡಿವೆ. ಇದೆಲ್ಲದರ ಫಲವಾಗಿ ಕೇರಳ ಕಸಾಯಿಖಾನೆಗಳಿಗೆ ಗೋವುಗಳ ಮೂಲದಂತಾಗಿದ್ದ ಕೇರಳದ ಜಾನುವಾರು ಸಂತೆಗಳಲ್ಲಿ ಗೋವುಗಳ ಸಂಖ್ಯೆ ಕ್ಷೀಣಿಸತೊಡಗಿದೆ.

ಕೇರಳ ರಾಜಧಾನಿ ತಿರುವನಂತಪುರ ಸಮೀಪದಲ್ಲಿರುವ ನೆಯ್ಯಟ್ಟಿಂ ಕರದಲ್ಲಿ ಪ್ರತಿ ಶನಿವಾರ ಜಾನುವಾರು ಜಾತ್ರೆ ನಡೆಯುತ್ತದೆ. ಏನಿಲ್ಲವೆಂ ದರೂ 500ರಿಂದ 700 ಜಾನುವಾರು ಮಾರಾಟವಾಗುತ್ತವೆ. ಆದರೆ ಈ ವಾರ ಕೇವಲ 150ರಿಂದ 200 ಜಾನುವಾರುಗಳಷ್ಟೇ ಮಾರುಕಟ್ಟೆಗೆ ಬಂದಿವೆ. ಗೋವುಗಳ ಕೊರತೆಯಿಂದಾಗಿ ಮಾಂಸದ ಬೆಲೆ ಹೆಚ್ಚಾಗುತ್ತಿದೆ. ಮಾಂಸದ ಕೊರತೆಯೂ ಕಾಡುತ್ತಿದೆ. .

ಕೇರಳದಲ್ಲಿ ಕಳೆದ ವರ್ಷ 11.7 ಲಕ್ಷ ವಯಸ್ಕ ಗೋವು ಹಾಗೂ 70000 ಚಿಕ್ಕವಯಸ್ಸಿನ ಪ್ರಾಣಿಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡಲಾಗಿದೆ. ಮಾಂಸೋದ್ಯಮದಲ್ಲಿ ಪ್ರತ್ಯಕ್ಷ/ಪರೋಕ್ಷವಾಗಿ 5 ಲಕ್ಷ ಮಂದಿ ಉದ್ಯೋಗ ಪಡೆದಿದ್ದಾರೆ.
ಗೋವಾದಲ್ಲೂ ಸಮಸ್ಯೆ: ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಗೋವಾ ಕೂಡ ಗೋಮಾಂಸಕ್ಕಾಗಿ ಕರ್ನಾಟಕದ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರದ ಸುತ್ತೋಲೆ ಹೊರಬಿದ್ದ ಬಳಿಕ ಗಡಿಯಲ್ಲಿ ಗೋವುಗಳ ವಾಹನಗಳ ಪ್ರವೇಶಕ್ಕೆ ಅನುಮತಿ ಸಿಗುತ್ತಿಲ್ಲ. ಹೀಗಾಗಿ ಗೋವಾದ ಕಸಾಯಿಖಾನೆಗಳಲ್ಲಿ ಇದ್ದ ದಾಸ್ತಾನು ಖಾಲಿಯಾಗಿದ್ದು, ಬರ ಕಾಡಲು ಆರಂಭಿಸಿದೆ. ಆದರೆ ಯಾವುದೇ ಗೋಸಾಗಣೆ ವಾಹನಗಳಿಗೆ ತಡೆ ನೀಡಿಲ್ಲ ಎಂದು ಸರ್ಕಾರ ಹೇಳಿದೆ.

ಕೋಳಿ ಮಾಂಸಕ್ಕೆ ಡಿಮ್ಯಾಂಡ್:

ಲಖನೌ: ಗೋ ಮಾಂಸದ ಕುರಿತ ಕೇಂದ್ರ ಸರ್ಕಾರದ ಸುತ್ತೋಲೆ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ, ದೇಶಾದ್ಯಂತ ಕೋಳಿ ಮಾಂಸಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಬೆಲೆಯೂ ಏರತೊಡಗಿದೆ. ಮುಂಬರುವ ದಿನಗಳಲ್ಲಿ ಕೋಳಿಮಾಂಸದ ಬೆಲೆ ಶೇ.25ರಿಂದ ಶೇ.30ರವರೆಗೂ ಹೆಚ್ಚಳ ವಾಗಬಹುದು ಎಂದು ಕೈಗಾರಿಕಾ ಸಂಸ್ಥೆ ಅಸೋಚಮ್‌ ಭವಿಷ್ಯ ನುಡಿದಿದೆ.

ತಲಾದಾಯ ಹೆಚ್ಚಳವಾಗುತ್ತಿರುವುದು, ಮಾಂಸ ಉಣ ಬಡಿಸುವ ರೆಸ್ಟೋರೆಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತಲೆ ಎತ್ತುತ್ತಿರುವುದು ಕೂಡ ಇದಕ್ಕೆ ಕಾರಣ ಎಂದು ಹೇಳಿದೆ. ಜತೆಗೆ ಮುಂದಿನ ದಿನಗಳಲ್ಲಿ ಕೋಳಿ ಮಾಂಸ ಭಕ್ಷಣೆ ಪ್ರಮಾಣ ಶೇ.35ರಿಂದ ಶೇ.40ರವರೆಗೆ ಹೆಚ್ಚಳವಾಗಬಹುದು ಎಂದು ಸಂಸ್ಥೆ ಯ ವರದಿ ತಿಳಿಸಿದೆ. 2014ರ ಮೇ (ಮೋದಿ ಪ್ರಧಾನಿಯಾದ ಬಳಿಕ) ಹಾಗೂ 2017ರ ಮಾಚ್‌ರ್‍ ನಡುವಣ ಅವಧಿಯಲ್ಲಿ ಗೋವು, ಎಮ್ಮೆ ಮಾಂಸದ ಬೇಡಿಕೆ ಶೇ.3ರಷ್ಟುಕುಸಿದಿದ್ದರೆ, ಕೋಳಿ ಮಾಂಸ ಬೇಡಿಕೆ ಶೇ.22ರಷ್ಟುಹೆಚ್ಚಳವಾಗಿದೆ. ಗೋಮಾಂಸ ವಿವಾದ ಕರ್ನಾಟಕವೂ ಸೇರಿದಂತೆ ಕುಕ್ಕುಟ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ವಿವಿಧ ರಾಜ್ಯಗಳಿಗೆ ವರದಾನವಾಗಿದೆ.