ಬೆಂಗಳೂರು[ಆ. 08]  ಕೇರಳದಲ್ಲೂ ರಣ ಭೀಕರ ಮಳೆಯಾಗುತ್ತಿದೆ. ಕೇರಳದಲ್ಲಿ ಭೂಕುಸಿತಕ್ಕೆ 40 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಯನಾಡಿನ ಮೆಪ್ಪಾಡಿ ಪುತ್ತುಮಲ ಎಂಬಲ್ಲಿ ಭೂ ಕುಸಿತ ಸಂಭವಿಸಿರುವ ವರದಿಯಾಗಿದೆ.

ಅಪಾಯಕ್ಕೆ ಸಿಲುಕಿದ್ದ ಮೂವರನ್ನುರಕ್ಷಿಸಲಾಗಿದೆ. ಭಾರೀ ಮಳೆಗೆ ಮಸೀದಿ, ದೇವಾಲಯಗಳು ಕೊಚ್ಚಿ ಹೋಗಿವೆ.  70 ಮನೆಗಳಿಗೆ  ಹಾನಿಯಾಗಿದೆ. ಘಟನಾ ಸ್ಥಳಕ್ಕೆ ತೆರಳಲು ರಕ್ಷಣಾ ಪಡೆಗಳು ಹರಸಾಹಸ ಮಾಡಬೇಕಾಗಿ ಬಂದಿದೆ.

ಕರುನಾಡ ಮಹಾಮಳೆ ಇನ್ನೆಷ್ಟು ದಿನ, ಲೆಕ್ಕ ಕೊಟ್ಟ ಹವಾಮಾನ ಇಲಾಖೆ

ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಭೂ ಕುಸಿತ ಒಳಗಾಗಿದೆ. ಅಧಿಕಾರಿಗಳು ಮತ್ತು ಕೇರಳದ ಸಿಎಂ ಜತೆ ಮಾತನಾಡಿ ಪರಿಹಾರ ಕ್ರಮದ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಅಲ್ಲಿಗೆ ತೆರಳಬೇಕಾಗಿತ್ತು.. ಆದರೆ ಹವಾಮಾನ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ರಾಹುಲ್ ಗಾಂಧಿ ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಮಾಡಿದ್ದಾರೆ.

ವಿಮಾನ ಹಾರಾಟ ಸ್ಥಗಿತ: ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿರುವುದರಿಂದ  ಆಗಸ್ಟ್ 9 ರಿಂದ ವಿಮಾನ ಹಾರಾಟ ಬಂದ್ ಮಾಡಲಾಗಿದೆ  ಎಂದು ಪ್ರಕಟಣೆ ತಿಳಿಸಿದೆ.