ನಿಪಾಗೆ ಬಲಿಯಾದವರಿಗೆ ವೈದ್ಯನಿಂದಲೇ ಅಂತ್ಯಸಂಸ್ಕಾರ

Kerala doctor performs last rites of Nipah victims
Highlights

ನಿಪಾ ವೈರಾಣು ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ನಡೆಸಲು ಯಾರೂ ಮುಂದೆ ಬಾರದ ಹಿನ್ನೆಲೆ ಕೇರಳದ ಸರ್ಕಾರಿ ವೈದ್ಯರೊಬ್ಬರು ತಾವೇ ಮುಂದೆ ನಿಂತು ವಿಧಿ-ವಿಧಾನ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೋಳಿಕ್ಕೋಡ್: ‘ನಿಪಾ’ ವೈರಾಣು ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ನಡೆಸಲು ಯಾರೂ ಮುಂದೆ ಬಾರದ ಹಿನ್ನೆಲೆ ಕೇರಳದ ಸರ್ಕಾರಿ ವೈದ್ಯರೊಬ್ಬರು ತಾವೇ ಮುಂದೆ ನಿಂತು ವಿಧಿ-ವಿಧಾನ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೋಳಿಕ್ಕೋಡ್ ನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ| ಆರ್.ಎಸ್. ಗೋಪಕುಮಾರ್ ಅವರ ಈ ಕೆಲಸ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವೈದ್ಯರ ಸ್ವಾರ್ಥರಹಿತ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಸಂಸ್ಕಾರ ನಡೆಸಿದರೂ ಈ ಸೋಂಕು ಹರಡುವ ಹಿನ್ನೆಲೆಯಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕುಟುಂಬದವರೇ ಮುಂದೆ ಬರುತ್ತಿಲ್ಲ. 

ಇಂಥ ವೇಳೆ ಡಾ| ಗೋಪಕುಮಾರ್ ಅವರು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮೂರು ಶವಗಳಿಗೆ  ತಾವೇ ಮುಂದೆ ನಿಂತು ಅಂತಿಮ ಸಂಸ್ಕಾರ ನಡೆಸಿದ್ದರೆ, 12 ಶವಗಳ ಅಂತ್ಯ ಕ್ರಿಯೆಯ ಜವಾಬ್ದಾರಿ ಹೊತ್ತು ಆ ಕಾರ್ಯ ನಿರ್ವಹಿಸಿದ್ದಾರೆ. 

ಕನ್ನಡಿಗನಿಗೂ ಈ ವೈದ್ಯ ನೆರವು: ಡಾ| ಗೋಪಕುಮಾರ್ ಅವರು ಕರ್ನಾಟಕ ಮೂಲದ ಮಹಿಳೆಯೊಬ್ಬಳ ಅಂತ್ಯಸಂಸ್ಕಾರದಲ್ಲೂ ಆಕೆಯ ಗಂಡನಿಗೆ ಭಾರಿ ನೆರವು ನೀಡಿ ಗಮನ ಸೆಳೆದಿದ್ದಾರೆ.

loader