ಸಂಘ ಪರಿವಾರದ ಭಾರೀ ವಿರೋಧದ ನಡುವೆಯೂ ಸಿಪಿಐಎಂ ರ್ಯಾಲಿಯಲ್ಲಿ ಭಾಗವಹಿಸಲು ಕೇರಳ ಸಿಎಂ ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿದ್ದಾರೆ. ಇವರ ಆಗಮನವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನರನಡೆಸಿದ್ದಾರೆ. ಪಂಡಿತ್ ಹೌಸ್, ಕೋಟೆಕಾರು, ಅಸೈಗೋಳಿಯಲ್ಲಿ ಕಿಡಿಗೇಡಿಗಳು ಟಯರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮಂಗಳೂರು (ಫೆ.25): ಸಂಘ ಪರಿವಾರದ ಭಾರೀ ವಿರೋಧದ ನಡುವೆಯೂ ಸಿಪಿಐಎಂ ರ್ಯಾಲಿಯಲ್ಲಿ ಭಾಗವಹಿಸಲು ಕೇರಳ ಸಿಎಂ ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿದ್ದಾರೆ. ಇವರ ಆಗಮನವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನರ
ನಡೆಸಿದ್ದಾರೆ. ಪಂಡಿತ್ ಹೌಸ್, ಕೋಟೆಕಾರು, ಅಸೈಗೋಳಿಯಲ್ಲಿ ಕಿಡಿಗೇಡಿಗಳು ಟಯರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಬಿ.ಸಿ ರಸ್ತೆಯ ತುಂಬೆ ಎಂಬಲ್ಲಿ ಶಾಲಾ ಬಳಿ ಸರ್ಕಾರಿ ಬಸ್ ಗೆ ಕಲ್ಲೆಸೆತ, ಮಂಜೇಶ್ವರ ಠಾಣಾ ವ್ಯಾಪ್ತಿಯ ತಲಪಾಡಿಯಲ್ಲಿ ಸರ್ಕಾರಿ ಬಸ್ ಗೆ ಕಲ್ಲು ತೂರಾಟ, ಕೋಣಾಜೆ ಗಣೇಶ್ ಮಹಲ್ ಕ್ರಾಸ್ ಬಳಿ ಬಸ್ ಗೆ ಕಲ್ಲೆಸತ ನಡೆದಿದೆ.
ಮಂಗಳೂರಿನ ಜಪ್ಪಿನಮೊಗರು ಬಳಿ ಹಿಂದೂ ಜಾಗರಣ ವೇದಿಕೆಯ ಸಂದೀಪ್ ಪಂಪುವೆಲ್, ಸುಭಾಷ್ ಪಡೀಲ್ ಸೇರಿದಂತೆ 9 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
