Asianet Suvarna News Asianet Suvarna News

ಉತ್ತಮ ಆಡಳಿತ ರಾಜ್ಯಗಳ ಪಟ್ಟಿಯಲ್ಲಿ ಕೇರಳ ನಂ 1: ಕರ್ನಾಟಕ?

ಉತ್ತಮ ಆಡಳಿತ ನೀಡುವ ರಾಜ್ಯಗಳ ಪಟ್ಟಿ

ಕೇರಳಕ್ಕೆ ಮೊದಲ ಸ್ಥಾನ, ಬಿಹಾರಕ್ಕೆ ಕೊನೆ ಸ್ಥಾನ

ಅಗ್ರ 5 ರಾಜ್ಯಗಳಲ್ಲಿ ಕರ್ನಾಟಕಕ್ಕೆ ಸ್ಥಾನ

ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೇರ್ಸ್ ಸೆಂಟರ್ 

Kerala best governed state in India, Bihar the worst: Report
Author
Bengaluru, First Published Jul 22, 2018, 7:34 PM IST

ಬೆಂಗಳೂರು(ಜು.22): ಭಾರತದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ರಾಜ್ಯಗಳ ಪೈಕಿ ಕೇರಳ ಮೊದಲನೇ ಸ್ಥಾನದಲ್ಲಿದ್ದು, ಬಿಹಾರ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರು ಮೂಲದ ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೇರ್ಸ್ ಸೆಂಟರ್(ಪಿಎಸಿ) 2018ರ ಅತ್ಯುತ್ತಮ ಆಡಳಿತ ನಡೆಸುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನಲ್ಲಿದೆ. ಇನ್ನು ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಉತ್ತಮ ಆಡಳಿತ ನೀಡುವ ಅಗ್ರ ಐದು ರಾಜ್ಯಗಳಾಗಿವೆ. 

ಇದೇ ವೇಳೆ ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳು ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ(ಪಿಐಐ)ದಲ್ಲಿ ಕೊನೆಯ ಸ್ಥಾನದಲ್ಲಿದೆ. ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಅಗ್ರಸ್ಥಾನದಲ್ಲಿದೆ. ಇನ್ನುಳಿದಂತೆ ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 

ಪಿಎಸಿ 2016ರಿಂದ ವಾರ್ಷಿಕವಾಗಿ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತಾ ಬಂದಿದೆ. ದತ್ತಾಂಶ-ಆಧಾರಿತ ಚೌಕಟ್ಟಿನ ಆಧಾರದ ಮೇಲೆ ರಾಜ್ಯಗಳ ಆಡಳಿತ ನಿರ್ಣಹಣೆಯನ್ನು ಪರಿಶೀಲಿಸಿ, ಅವುಗಳು ಒದಗಿಸುವ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಆಧರಿಸಿ ಪಟ್ಟಿ ಪ್ರಕಟ ಮಾಡುತ್ತದೆ.  1994ರಲ್ಲಿ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ವಿದ್ವಾಂಸ ಸ್ಯಾಮ್ಯುಯೆಲ್ ಪಾಲ್ ಅವರು ಥಿಂಕ್ ಟ್ಯಾಂಕ್ ಸ್ಥಾಪನೆ ಮಾಡಿದ್ದರು.

Follow Us:
Download App:
  • android
  • ios