ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್​ ಹುದ್ಧೆ ಪಡೆದಿರೋ ಗೃಹ ಸಲಹೆಗಾರ ಕೆಂಪಯ್ಯಗೆ ಸಿಬಿಐ ಸಂಕಷ್ಟ ಎದುರಾಗಲಿದೆ. ಕೆಂಪಯ್ಯ  ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೋಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್​​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು(ಸೆ.15): ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್​ ಹುದ್ಧೆ ಪಡೆದಿರೋ ಗೃಹ ಸಲಹೆಗಾರ ಕೆಂಪಯ್ಯಗೆ ಸಿಬಿಐ ಸಂಕಷ್ಟ ಎದುರಾಗಲಿದೆ. ಕೆಂಪಯ್ಯ ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೋಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್​​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧಪಟ್ಟಂತೆ 1990 ರಲ್ಲಿ ಪೊಲೀಸ್​ ಇಲಾಖೆ ತನಿಖೆ ನಡೆಸಿ ಕೆಂಪಯ್ಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್​​ ಹುದ್ಧೆ ಪಡೆದಿದ್ದಾರೆ ಎಂದು ಸಾಬೀತು ಮಾಡಿತ್ತು. ಇಲಾಖೆ ವರದಿ ಆಧಾರಿಸಿ ಅಜಯ್​ ಕುಮಾರ್​ ಸಿಂಗ್​ ಕ್ರಮ ಕೈಗೊಳ್ಳುವ ಮುನ್ನ ಕೆಂಪಯ್ಯ ಸ್ವಯಂ ನಿವೃತ್ತಿ ಪಡೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಪ್ರಕರಣ ಹೈಕೋರ್ಟ್​ ಮೆಟ್ಟಿಲೇರಿದ್ದು ಕೆಂಪಯ್ಯನನ್ನ ಸಿಬಿಐ ಭೂತ ಕಾಡಲಾರಂಭಿಸಿದೆ.

ಒಂದು ಕಡೆ ಸರ್ಕಾರ ಕಂಪಯ್ಯನನ್ನ ಸೈಡ್​​ ಲೈನ್​ ಮಾಡ್ತಿದ್ರೆ, ಸದ್ಯದಲ್ಲಿ ಸಿಬಿಐ ಭೂತ ಕೆಂಪಯ್ಯನನ್ನು ಕಾಡುವುದು ನಿಶ್ಚಿತ.