ಮೋದಿಯವರೇ ನಿಮ್ಮನ್ನು ನೀವೇ ಫಕೀರನೆಂದು ಹೇಳಿಕೊಳ್ಳುತ್ತೀರ, ಆದರೆ, ರೂ. 10 ಲಕ್ಷದ ಸೂಟುಗಳನ್ನು ಧರಿಸಿ, ವಿಶ್ವದೆಲ್ಲಡೆ ಪ್ರವಾಸ ಕೈಗೊಳ್ಳುತ್ತೀರಿ. ನಿಮ್ಮ ಮಾತಿನ ಮೇಲೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆಂದು ಕೇಜ್ರಿವಾಲ್ ಹೇಳಿದ್ದಾರೆ.

ನವದೆಹಲಿ (ಡಿ.04): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ವಿರುದ್ಧ ಮತ್ತೆ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಫಕೀರನೆಂದು ಕರೆದುಕೊಳ್ಳುತ್ತಾರೆ, ಆದರೆ 10 ಲಕ್ಷ ರೂ. ಮೌಲ್ಯದ ಸೂಟು ಧರಿಸಿ ವಿಶ್ವದೆಲ್ಲೆಡೆ ಪ್ರವಾಸ ಮಾಡುತ್ತಾರೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.

ಮೋದಿಯವರೇ ನಿಮ್ಮನ್ನು ನೀವೇ ಫಕೀರನೆಂದು ಹೇಳಿಕೊಳ್ಳುತ್ತೀರ, ಆದರೆ, ರೂ. 10 ಲಕ್ಷದ ಸೂಟುಗಳನ್ನು ಧರಿಸಿ, ವಿಶ್ವದೆಲ್ಲಡೆ ಪ್ರವಾಸ ಕೈಗೊಳ್ಳುತ್ತೀರಿ. ನಿಮ್ಮ ಮಾತಿನ ಮೇಲೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆಂದು ಕೇಜ್ರಿವಾಲ್ ಹೇಳಿದ್ದಾರೆ.

ಪ್ರಧಾನಮಂತ್ರಿ ಒಂದಾದ ಮೇಲೊಂದರಂತೆ ಸಂಸ್ಥೆಗಳನ್ನು ನಾಶಪಡಿಸುತ್ತಿದ್ದಾರೆ. ಆರ್’ಬಿಐ, ಸಿಬಿಐ, ವಿಶ್ವವಿದ್ಯಾಲಯಗಳು, ಬಳಿಕ ಇದೀಗ ನ್ಯಾಯಾಂಗವನ್ನು ಸಾಯಿಸುತ್ತಿದ್ದಾರೆ. ಕಳೆದ 65 ವರ್ಷಗಳಿಂದ ಏನನ್ನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ಮೋದಿಯವರು 5 ವರ್ಷದಲ್ಲಿ ಮಾಡುತ್ತಿದ್ದಾರೆಂದು ಕೇಜ್ರಿವಾಲ್ ಆರೋಪಿಸಿದ್ದಾರೆ.