Asianet Suvarna News Asianet Suvarna News

ಕೇದಾರನಾಥ : 5 ವರ್ಷದ ಹಿಂದಿನ 450 ಮೃತದೇಹ ಪತ್ತೆ

ಉತ್ತರಾಖಂಡ್‌ನ ಕೇದಾರನಾಥ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 5 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದ್ದವರ ಅಸ್ಥಿಪಂಜರಗಳು ಮತ್ತೆ ಪತ್ತೆಯಾಗಿವೆ. 

Kedarnath Flood 450 Dead Bodies Found
Author
Bengaluru, First Published Oct 16, 2018, 11:37 AM IST

ಡೆಹ್ರಾಡೂನ್: ಉತ್ತರಾಖಂಡ್‌ನ ಕೇದಾರನಾಥ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 5 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದ್ದವರ ಅಸ್ಥಿಪಂಜರಗಳು ಮತ್ತೆ ಪತ್ತೆಯಾಗಿವೆ. 

ಇಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕೈಗೊಳ್ಳಲಾದ 3 ದಿನಗಳ ಶೋಧ ಕಾರ್ಯಾಚರಣೆಯಲ್ಲಿ ನಾಲ್ಕು ತಲೆಬುರುಡೆಗಳು ಸೇರಿದಂತೆ ಒಟ್ಟು 21 ಅಸ್ಥಿಪಂಜರಗಳು ಪತ್ತೆಯಾಗಿವೆ. 

2013ರಲ್ಲಿ ಸಂಭವಿಸಿದ ಕೇದರನಾಥ ಭೂಕುಸಿತ ಮತ್ತು ಪ್ರವಾಹದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. 3500 ಮಂದಿ ನಾಪತ್ತೆಯಾಗಿದ್ದು, ಇದರಲ್ಲಿ 450 ಮೃತದೇಹಗಳು ಪತ್ತೆಯಾಗಿವೆ ಎಂದು ರಾಜ್ಯ ಸರ್ಕಾರ ಹೇಳಿತ್ತು. 

ಈ ಹಿನ್ನೆಲೆಯಲ್ಲಿ, ಉಳಿದವರೂ ಸಹ ಅವಶೇಷಗಳಡಿ ಮುಚ್ಚಿ ಹೋಗಿರಬಹುದು. ಈ ಬಗ್ಗೆ ಮತ್ತೊಮ್ಮೆ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ ಹೈಕೋರ್ಟ್ ಆದೇಶ ಪಾಲನೆಗಾಗಿ ರಾಜ್ಯ ಸರ್ಕಾರ, 3 ದಿನಗಳ ಶೋಧ ಕಾರ್ಯಾಚರಣೆ ಕೈಗೊಂಡಿತು.

Follow Us:
Download App:
  • android
  • ios