ಗಂಗಾನಗರದ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಸಂಬಂಧಿಗಳ ಬ್ಯಾಂಕ್​ ಖಾತೆ ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ವೀರೇಂದ್ರನ ಆಪ್ತರಾದ ನಾಗರಾಜು ಮತ್ತು ತಿಪ್ಪೇಸ್ವಾಮಿಯ ತೀವ್ರ ವಿಚಾರಣೆ ನಡೆದಿದೆ. ವೀರೇಂದ್ರನ ಆಪ್ತ ಸುಮಂದರ್​ ಸಿಂಗ್​`ನನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ.

ಬೆಂಗಳೂರು(ಡಿ.14): ಬಾತ್ ರೂಂ ತಿಜೋರಿಯಲ್ಲಿ ಕೋಟಿ ಕೋಟಿ ಅಕ್ರಮ ಸಂಪತ್ತು ಇಟ್ಟಿದ್ದ ಹವಾಲ ಕಿಂಗ್ ಪಿನ್, ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ವೀರೇಂದ್ರನ ವಿಚಾರಣೆಯನ್ನ ಸಿಬಿಐ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಅಕ್ರಮದಲ್ಲಿ ಆತನ ಸಂಬಂಧಿಗಳೂ ಭಾಗಿಯಾಗಿದ್ದು, ವೀರೇಂದ್ರನ ಹತ್ತಕ್ಕೂ ಹೆಚ್ಚು ಸಂಬಂಧಿಗಳನ್ನ ವಿಚಾರಣೆ ನಡೆಸಲಾಗುತ್ತಿದೆ.

ಗಂಗಾನಗರದ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಸಂಬಂಧಿಗಳ ಬ್ಯಾಂಕ್​ ಖಾತೆ ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ವೀರೇಂದ್ರನ ಆಪ್ತರಾದ ನಾಗರಾಜು ಮತ್ತು ತಿಪ್ಪೇಸ್ವಾಮಿಯ ತೀವ್ರ ವಿಚಾರಣೆ ನಡೆದಿದೆ. ವೀರೇಂದ್ರನ ಆಪ್ತ ಸುಮಂದರ್​ ಸಿಂಗ್​`ನನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ.

ಈ ಮಧ್ಯೆ, ವೀರೇಂದ್ರನ ಜೊತೆ ಸೇರಿ ಚಿತ್ರದುರ್ಗ ಜಿಲ್ಲೆಯ ಎಸ್​ಬಿಐ, ಎಸ್​ಬಿಎಮ್​, ಐಸಿಐಸಿಐ, ಕೋಟಕ್​ ಮಹಿಂದ್ರಾ ಮತ್ತಿತರ ಬ್ಯಾಂಕ್​`ಗಳ ಅಧಿಕಾರಿಗಳು ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಬ್ಯಾಂಕ್​ನ ಅಧಿಕಾರಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡುವ ಸಾಧ್ಯತೆ ಇದೆ.