ಜನಪ್ರಿಯ ಟಿವಿ ಶೋ  ಕೋಟ್ಯಧಿಪತಿಯಾಗಿ ಅಸ್ಸಾಂನ ಬಿನೀತಾ ಜೈನ್  ಆಯ್ಕೆಯಾಗಿದ್ದಾರೆ. ಬಿನೀತಾ ಅಮಿತಾಭ್ ಬಚ್ಚನ್‌ರ 14 ನೇ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಮೆಗಾ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಮುಂಬೈ: ಜನಪ್ರಿಯ ಟಿವಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ಯ 10 ನೇ ಆವೃತ್ತಿಯ ಮೊದಲ ಕೋಟ್ಯಧಿಪತಿಯಾಗಿ ಅಸ್ಸಾಂನ ಬಿನೀತಾ ಜೈನ್ ಆಯ್ಕೆಯಾಗಿದ್ದಾರೆ. ಬಿನೀತಾ ಅಮಿತಾಭ್ ಬಚ್ಚನ್‌ರ 14 ನೇ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಮೆಗಾ ಬಹುಮಾನ ತಮ್ಮದಾಗಿಸಿ ಕೊಂಡಿದ್ದಾರೆ.

 ಅ. 2 ರಂದು ಪ್ರಸಾರಗೊಳ್ಳಲಿರುವ ಆವೃತ್ತಿಯಲ್ಲಿ ಕೋಟಿ ರು. ವರೆಗೂ ಬಹುಮಾನ ಗೆಲ್ಲಬಹುದಾದ ಈ ಸ್ಪರ್ಧೆಯಲ್ಲಿ ಬಿನೀತಾ ಕೊನೆಯ ಪ್ರಶ್ನೆಗೆ ಎಚ್ಚರಿಕೆಯಿಂದ ಉತ್ತರ ನೀಡುವಂತೆ ಬಚ್ಚನ್ ಸೂಚಿಸುವುದು ಮತ್ತು 1 ಕೋಟಿ ರು. ಗೆದ್ದಿರುವುದಕ್ಕೆ ಅಭಿನಂದಿಸಿರುವ
ವೀಡಿಯೊ ವೈರಲ್ ಆಗಿದೆ.