ಮುಂಬೈ : ಹಿಂದಿಯ ಪ್ರಸಿದ್ಧ ಟಿವಿ ನಟಿ ಕವಿತಾ ಕೌಶಿಕ್ ಅವರು ಸದ್ಯ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ. ಅವರ ಮಾರ್ಪಡಿಸಿದ ನಗ್ನ ಚಿತ್ರಗಳು ಫೇಸ್ ಬುಕ್ ನಲ್ಲಿ ವಿಪರೀತವಾಗಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ಖಾತೆಯನ್ನು ಡೀ ಆಕ್ಟಿವೇಟ್ ಮಾಡಿದ್ದಾರೆ. 

ಅಲ್ಲದೇ ಫೇಸ್ ಬುಕ್ ಖಾತೆಯನ್ನು ಕ್ಲೋಸ್ ಮಾಡುವ ಮುನ್ನ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅತ್ಯಂತ ಕೆಟ್ಟ ಚಿತ್ರಗಳನ್ನು ಬಳಸಿದ ಬಗ್ಗೆ ತಿಳಿಸಿದ್ದಾರೆ.

ಇಂತಹ ಕೃತ್ಯದ ಬಗ್ಗೆ ತೀವ್ರ ಅಸಮಧಾನ ಹೊರ ಹಾಕಿದ ಅವರು ತಮ್ಮ ಚಿತ್ರಗಳನ್ನು ಮಾರ್ಪಡಿಸಿ ಹರಿಯ ಬಿಡಲಾಗಿದೆ. ಆದ್ದರಿಂದ ಫೇಸ್ ಬುಕ್ ತಾವು ಮುಂದುವರಿಯುವುದು ಸರಿ ಎಂದು ಕಾಣಿಸುತ್ತಿಲ್ಲ.  ನಾನು ಫೇಸ್ ಬುಕ್ ಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ರೀತಿ ಕೃತ್ಯ ಎಸಗುವವರ ಮನಸ್ಥಿತಿ ಬಗ್ಗೆಯೂ ಕೂಡ ವಾಗ್ದಾಳಿ ನಡೆಸಿದ್ದಾರೆ. 

 ಕವಿತಾ ಅನೇಕ ಹಿಂದಿ ಶೋ ಗಳನ್ನು ಮಾಡಿದ್ದು, ಕೆಲವು ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ.