ದೀಪಿಕಾ ಪಡುಕೋಣೆಯನ್ನೂ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಕತ್ರಿನಾ

Katrina Kaif got first place in Social Media
Highlights

ಸೋಷಿಯಲ್  ಮೀಡಿಯಾಗಳಲ್ಲಿ ಯಾರ್ಯಾರ ಖ್ಯಾತಿ ಎಷ್ಟೆಷ್ಟಿದೆ ಎನ್ನುವುದರ ಮೇಲೆ ಫ್ಯಾನ್  ಫಾಲೋವರ್ಸ್'ಗಳು ಎಷ್ಟಿದ್ದಾರೆ ಎನ್ನುವ ಜಮಾನದಲ್ಲಿ ಕತ್ರಿನಾ ಕೈಫ್  ಮತ್ತೊಬ್ಬ ನಟಿ ದೀಪಿಕಾ ಪಡುಕೋಣೆಯನ್ನು ಹಿಂದೆ ಹಾಕಿ ಇನ್ಸ್ಟಾಗ್ರಾಂನಲ್ಲೂ ಎಂಟು ಮಿಲಿಯನ್  ಫಾಲೋವರ್ಸ್'ಗಳನ್ನು ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.

ಬೆಂಗಳೂರು (ಫೆ.07): ಸೋಷಿಯಲ್  ಮೀಡಿಯಾಗಳಲ್ಲಿ ಯಾರ್ಯಾರ ಖ್ಯಾತಿ ಎಷ್ಟೆಷ್ಟಿದೆ ಎನ್ನುವುದರ ಮೇಲೆ ಫ್ಯಾನ್  ಫಾಲೋವರ್ಸ್'ಗಳು ಎಷ್ಟಿದ್ದಾರೆ ಎನ್ನುವ ಜಮಾನದಲ್ಲಿ ಕತ್ರಿನಾ ಕೈಫ್  ಮತ್ತೊಬ್ಬ ನಟಿ ದೀಪಿಕಾ ಪಡುಕೋಣೆಯನ್ನು ಹಿಂದೆ ಹಾಕಿ ಇನ್ಸ್ಟಾಗ್ರಾಂನಲ್ಲೂ ಎಂಟು ಮಿಲಿಯನ್  ಫಾಲೋವರ್ಸ್'ಗಳನ್ನು ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.

ಇದಕ್ಕಿಂತಲೂ ಹೆಚ್ಚಾಗಿ ಮುಂದೆ ಇನ್ಸ್ಟಾಗ್ರಾಂನಲ್ಲಿ  ಫಾಲೋವರ್ಸ್'ಗೆ ಒಳ್ಳೊಳ್ಳೆ ಫೋಟೋ, ವಿಡಿಯೋಗಳನ್ನೂ ಅಪ್'ಲೋಡ್  ಮಾಡುವ ಭರವಸೆ  ನೀಡಿದ್ದಾರೆ. ‘ನನಗೆ ಇನ್ಸ್ಟಾಗ್ರಾಂನಲ್ಲೂ  ಸೇರುವಾಗ ಇಷ್ಟೆಲ್ಲಾ  ಅಭಿಮಾನಿಗಳು ಫಾಲೋ ಮಾಡುತ್ತಾರೆ ಎನ್ನುವ ನಂಬಿಕೆ ಇರಲಿಲ್ಲ. ಆದರೆ ಈಗ ನಿರೀಕ್ಷೆಗೂ ಮೀರಿದ ಅಭಿಮಾನಿಗಳು ಫಾಲೋವರ್ಸ್'ಗಳಾಗಿದ್ದಾರೆ.  ಮುಂದೆ ನನ್ನ  ಪ್ರತಿ ಮೊಮೆಂಟ್'ಗಳನ್ನೂ ಇನ್ಸ್ಟಾಗ್ರಾಂನಲ್ಲಿ  ಅಪ್'ಲೋಡ್  ಮಾಡುತ್ತೇನೆ. ನನ್ನದೇ ವಾಲ್'ನಲ್ಲಿ ನನ್ನ ಸಂತೋಷ ಹಂಚಿಕೊಳ್ಳುತ್ತೇನೆ’ ಎಂದು ಹೇಳಿ ಅಭಿಮಾನಿಗಳಿಗೆ ಸಿಹಿ ಸುದ್ಧಿ ನೀಡಿದ್ದಾರೆ.

ಅದೂ ಅಲ್ಲದೇ ‘ಸೋಷಿಯಲ್ ಮೀಡಿಯಾದಿಂದ ನನ್ನ ಜೀವನವೇನೂ ಬದಲಾಗಲ್ಲ. ಆದರೆ ನನ್ನ ಬಗೆಗಿನ ಸಂಗತಿಗಳು ಇನ್ನುಮುಂದೆ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳನ್ನು ತಲುಪಲಿದೆ’ ಎಂದು ಹೇಳಿದರು.  ಇನ್ಸ್ಟಾಗ್ರಾಂನಲ್ಲಿ ನನ್ನನ್ನು ಯಾರೆಲ್ಲಾ ಫಾಲೋ ಮಾಡುತ್ತಿದ್ದಾರೋ ಅವರೊಂದಿಗೆಲ್ಲಾ ನಾನು ನಿರಂತರ ಸಂಪರ್ಕದಲ್ಲಿರುತ್ತೇನೆ ಎನ್ನುವ ಮೂಲಕ ಮೊ ದಲ ಸ್ಥಾ ನಿಯಾಗಿ  ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಕತ್ರಿನಾ.

 

loader