ಚಲಿಸುವ ರೈಲಿನ ಕೆಳಗೆ ಮಲಗಿ ಕಾಶ್ಮೀರಿ ಯುವಕನ ದುಸ್ಸಾಹಸ : ವಿಡಿಯೋ ವೈರಲ್

First Published 25, Jan 2018, 1:50 PM IST
Kashmiri man Attempts life Threatening Rail stunt
Highlights

ಚಲಿಸುತ್ತಿರುವ ರೈಲಿನ ಅಡಿ ಹಳಿಗಳ ನಡುವೆ ಮಲಗಿ ಸಾಹಸ ಪ್ರದರ್ಶಿಸಿದ ಕಾಶ್ಮೀರಿ ಯುವಕನೊಬ್ಬನ ವಿಡಿಯೋ ಈಗ ವೈರಲ್ ಆಗಿದೆ.

ಶ್ರೀನಗರ: ಚಲಿಸುತ್ತಿರುವ ರೈಲಿನ ಅಡಿ ಹಳಿಗಳ ನಡುವೆ ಮಲಗಿ ಸಾಹಸ ಪ್ರದರ್ಶಿಸಿದ ಕಾಶ್ಮೀರಿ ಯುವಕನೊಬ್ಬನ ವಿಡಿಯೋ ಈಗ ವೈರಲ್ ಆಗಿದೆ. ವೇಗವಾಗಿ ರೈಲು ಬರುತ್ತಿರುವಾಗ ಮುಖ ಕೆಳಗೆ ಮಾಡಿ ಈತ ಮಲಗುತ್ತಾನೆ.

ಆಗ ರೈಲು ವೇಗವಾಗಿ ಹಾದು ಹೋಗುತ್ತದೆ. ಅದೃಷ್ಟವಶಾತ್ ಯುವಕ ಬಚಾವಾಗುತ್ತಾನೆ ಹಾಗೂ ತಾನು ಬಚಾವಾದೆ ಎಂದು ರೈಲು ಹೋದ ನಂತರ ಕುಣಿದು ಕುಪ್ಪಳಿಸ್ತುತಾನೆ. ಯಾರೋ ಪರಿಚಯದವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಮಾಧ್ಯಮಗಳಿಗೆ ಹಾಕಿದ್ದಾರೆ.

ಈ ಸಾಹಸ ಮಾಡಿದ ಯುವಕನನ್ನು ಬಿಜ್‌ಬೆಹರಾ ಪಟ್ಟಣದ ಆದಿಲ್ ಎಂದು ಗುರುತಿಸಲಾಗಿದೆ. ಇದರ ಬೆನ್ನಲ್ಲೇ ಆದಿಲ್ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ.

ಈತನ  ದುಸ್ಸಾಹಸಕ್ಕೆ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

loader