Asianet Suvarna News Asianet Suvarna News

ಕಾಶ್ಮೀರ, ಕಾಶ್ಮೀರಿಗಳು ಹಾಗೂ ಕಾಶ್ಮೀರಿತನ ನಮ್ಮದು: ರಾಜನಾಥ್ ಸಿಂಗ್

ಕಾಶ್ಮೀರ, ಕಾಶ್ಮೀರಿಗಳು ಹಾಗೂ ಕಾಶ್ಮೀರಿಯತ್ ಭಾರತಕ್ಕೆ ಸೇರಿದ್ದು. ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಬದ್ದವಾಗಿದೆ ಎಂಬುವುದನ್ನು ನಾನು ಖಚಿತಪಡಿಸುತ್ತಿದ್ದೇನೆ, ಎಂದು ಸಿಕ್ಕಿಮ್’ನಲ್ಲಿ ಸಭೆಯನ್ನುದ್ದೇಶಿಸಿ ರಾಜನಾಥ್ ಸಿಂಗ್ ಹೇಳಿದ್ದಾರೆ.

Kashmir Kashmiris Kashmiriyat is ours Says Rajnath Singh

ಪೆಲ್ಲಿಂಗ್, ಸಿಕ್ಕಿಮ್ (ಮೇ.21): ಕಾಶ್ಮೀರ, ಕಾಶ್ಮೀರಿಗಳು ಹಾಗೂ ಕಾಶ್ಮೀರಿಯತ್ (ಕಾಶ್ಮೀರತನ) ಭಾರತಕ್ಕೆ ಸೇರಿದ್ದು ಎಂದಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ , ಕಾಶ್ಮೀರ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಕಂಡುಹಿಡಿಯಲು ಸರ್ಕಾರ ಬದ್ದವಾಗದೆಯೆಂದು ಹೇಳಿದ್ದಾರೆ.

ಕಾಶ್ಮೀರ, ಕಾಶ್ಮೀರಿಗಳು ಹಾಗೂ ಕಾಶ್ಮೀರಿಯತ್ ಭಾರತಕ್ಕೆ ಸೇರಿದ್ದು. ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಬದ್ದವಾಗಿದೆ ಎಂಬುವುದನ್ನು ನಾನು ಖಚಿತಪಡಿಸುತ್ತಿದ್ದೇನೆ, ಎಂದು ಸಿಕ್ಕಿಮ್’ನಲ್ಲಿ ಸಭೆಯನ್ನುದ್ದೇಶಿಸಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಪಾಕಿಸ್ತಾನವು ಕಾಶ್ಮೀರದ ಹೆಸರಿನಲ್ಲಿ ಹಿಂಸೆಯನ್ನು ಮುಂದುವರೆಸಿದೆ. ಆದರೆ ಇಂತಹ ರೀತಿಗಳನ್ನು ಕೈಬಿಟ್ಟು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹಾಗೂ ಸಹಕಾರ ನೀಡಲು ಪಾಕಿಸ್ತಾನ ಮುಂದಾಗು ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ಗಡಿಗೆ ಸಂಬಂಧಿಸಿ ಚೀನಾದೊಂದಿಗಿನ ಸಂಘರ್ಷ ಕಡಿಮೆಯಾಗಿದೆ.  ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್’ಗೆ ಆಹ್ವಾನ ನೀಡಿದ್ದು ಸೌಹಾರ್ದಾಯುತ ಸಂಬಂಧ ಬೆಳೆಸುವಂತಾಗಲೇ ಹೊರತು ಕೇವಲ ದ್ವಿಪಕ್ಷೀಯ ಸಂಬಂಧ ಮುಂದುವರಿಸಲು ಅಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Follow Us:
Download App:
  • android
  • ios