ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸ್ಬೇಡಿ: ಶೆಹ್ಲಾಗೆ ಕಾಂಗ್ರೆಸ್ ನಾಯಕನ ಮನವಿ!

ಜಮ್ಮು ಕಾಶ್ಮೀರ ನಾಗರಿಕ ಮೇಲೆ ಸೇನೆ ದೌರ್ಜನ್ಯ ನಡೆಸುತ್ತದೆ ಅಂದ್ರು ಶೆಹ್ಲಾ ರಶೀದ್| ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂದ್ರು ಕಾಂಗ್ರೆಸ್ ನಾಯಕ

Kashmir Congress leader slams Shehla Rashid junks claims of Army excess in Valley

ನವದೆಹಲಿ[ಆ.20]: ಇತ್ತೀಚೆಗಷ್ಟೇ JNU ಹಳೆ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಭಾರತೀಯ ಸೇನೆ ಜಮ್ಮು ಕಾಶ್ಮೀರದ ಜನರನ್ನು ಭಯ ಭೀತಗೊಳಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು. ವರ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದು ವೈರಲ್ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ಸೇನೆ ಆರೋಪವನ್ನು ತಳ್ಳಿ ಹಾಕಿತ್ತು. ಸದ್ಯ ಕಾಂಗ್ರೆಸ್ ನಾಯಕರೊಬ್ಬರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಶೆಹ್ಲರಲ್ಲಿ ಮನವಿ ಮಾಡಿದ್ದಾರೆ.

ಹೌದು ಕಾಶ್ಮೀರದ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮೀ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಸೇನೆ ಇಲ್ಲಿನ ನಾಗರಿಕರ ಮೇಲೆ ಹಲ್ಲೆ ನಡೆಸುತ್ತಿದೆ ಎಂದು ಕಾಶ್ಮೀರದ ಪತ್ರಕರ್ತರಿಗೂ ಇಲ್ಲ ಎಂಬುವುದು ಅಚ್ಚರಿ ಮೂಡಿಸುವಂತಹದ್ದು. ದೆಹಲಿಯ ಫೈವ್ ಸ್ಟಾರ್ ಹೋಟೆಲ್ ರೂಂನಲ್ಲಿ ಕುಳಿತು ಇಂತಹ ಮಾಹಿತಿ ಪಡೆಯುತ್ತಾರೆ ಎಂಬುವುದೇ ಬಹುದೊಡ್ಡ ಪ್ರಶ್ನೆ. ನೀವು ಅತಿ ಉತ್ಸಾಹ ಹಾಗೂ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶದಿಂದ ಇಂತಹ ಆಧಾರರಹಿತ ಮಾತುಗಳನ್ನಾಡಬಾರದು' ಎಂದಿದ್ದಾರೆ.

ಕಾಶ್ಮೀರ ನಾಗರಿಕರ ಮೇಲೆ ದೌರ್ಜನ್ಯವಾಗಿಲ್ಲ, ಶೆಹ್ಲಾ ಹೇಳಿದ್ದೆಲ್ಲಾ ಸುಳ್ಳು: ಭಾರತೀಯ ಸೇನೆ

ಶೆಹ್ಲಾ ಟ್ವೀಟ್‌ನಲ್ಲೇನಿತ್ತು?

ಸರಣಿ ಟ್ವೀಟ್ ಗಳನ್ನು ಮಾಡಿದ್ದ ಜೆ ಎನ್ ಯು ಹಳೆ ವಿದ್ಯಾರ್ಥಿನಿ ಶೆಹ್ಲಾ ರಶೀದ್ 'ಭದ್ರತಾ ಸಿಬ್ಬಂದಿ ರಾತ್ರಿ ವೇಳೆ ಇಲ್ಲಿನ ಜನರ ಮನೆಗೆ ಪ್ರವೇಶಿಸಿ ಯುವಕರನ್ನು ಎಳೆದೊಯ್ಯುತ್ತಿದ್ದಾರೆ ಹಾಗೂ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಹಾಳು ಮಾಡುತ್ತಿದ್ದಾಋಎ. ಮನೆಯೊಳಗಿರುವ ಅಕ್ಕಿ, ಕಾಳು, ಎಣ್ಣೆ ಮೊದಲಾದ ಆಹಾರ ಸಾಮಗ್ರಿಗಳನ್ನು ನೆಲದ ಮೇಲೆ ಚೆಲ್ಲಿ ಹಾಳುಗೆಡವುತ್ತಿದ್ದಾರೆ. ಶೋಪಿಯಾಂದಲ್ಲಿ ನಾಲ್ವರನ್ನು ಆರ್ಮಿ ಕ್ಯಾಂಪ್ ಗೆ ಕರೆಸಿ, ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಅವರಿಗೆ ಮೈಕ್ ಒಂದನ್ನು ನೀಡಲಾಗಿತ್ತು. ಈ ಮೂಲಕ ಇಡೀ ಇಲಾಖೆಗೆ ಅವರ ಕೂಗು ಕೇಳಿಸಿ ಭಯ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಕಣಿವೆ ನಾಡಿನ ಜನರಲ್ಲಿ ಭಯ ಮನೆ ಮಾಡಿದೆ' ಎಂದಿದ್ದರು.

Latest Videos
Follow Us:
Download App:
  • android
  • ios