ತಮಿಳುನಾಡಿನ ಸಿಎಂ ಆಸ್ಪತ್ರೆ ಸೇರಿ 18 ದಿನಗಳು ಕಳೆದಿದೆ. ಇಂದು 19ನೇ ದಿನ. ಇನ್ನೂ ಜಯಲಲಿತಾ ಆರೋಗ್ಯಸ್ಥಿತಿ ಅನ್ನೂ ನಿಗೂಢವಾಗಿದೆ. ಇದರ ನಡುವೆ ಡಿಎಂಕೆ ಮುಖ್ಯಸ್ಥ  ಕರುಣಾನಿಧಿ ಪತ್ರ ಬರೆದು ತಮಿಳುನಾಡು ಆಡಳಿತ ಯಂತ್ರ ಕುಸಿದಿದೆ, ಹೀಗಾಗಿ ಕೇಂದ್ರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ.ತಮಿಳುನಾಡು ಆಡಳಿತ ಯಂತ್ರ ಕುಸಿದಿದೆ: ಸಚಿವರೆಲ್ಲಾ ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾರೆತಮಿಳುನಾಡು ಸಿಎಂ ಅಪೋಲೋ ಅಸ್ಪತ್ರೆ ಸೇರಿ 18 ದಿನ ಕಳೆದಿದೆ. ಏನೂ ಅಪ್​'ಡೇಟ್​ ಸಿಗುತಿಲ್ಲ. ಸದ್ಯಕ್ಕಂತೂ ಅಮ್ಮಾ ಆಸ್ಪತ್ರೆಯಿಂದ ಹೊರಬರುವ ಲಕ್ಷಣ ಕಾಣುತ್ತಿಲ್ಲ. ಜಯಾ ಆಸ್ಪತ್ರೆ ಸೇರಿ ವಾರದೊಳಗೆ ಜಯಾ ಆರೋಗ್ಯದ ಮಾಹಿತಿ ಕೊಡಿ ಎಂದು ಕೇಳಿದ್ದ ಕರುಣಾನಿಧಿ ನಿನ್ನೆ ಕೇಂದ್ರ ಸರ್ಕಾರ ಹಾಗೂ ಹಂಗಾಮಿ ರಾಜ್ಯಪಾಲರಿಗೆ ಸುಧೀರ್ಘ ಪತ್ರವೊಂದನ್ನು ಬರೆದಿದ್ದಾರೆ.

ಚೆನ್ನೈ(ಅ.11): ತಮಿಳುನಾಡಿನ ಸಿಎಂ ಆಸ್ಪತ್ರೆ ಸೇರಿ 18 ದಿನಗಳು ಕಳೆದಿದೆ. ಇಂದು 19ನೇ ದಿನ. ಇನ್ನೂ ಜಯಲಲಿತಾ ಆರೋಗ್ಯಸ್ಥಿತಿ ಅನ್ನೂ ನಿಗೂಢವಾಗಿದೆ. ಇದರ ನಡುವೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪತ್ರ ಬರೆದು ತಮಿಳುನಾಡು ಆಡಳಿತ ಯಂತ್ರ ಕುಸಿದಿದೆ, ಹೀಗಾಗಿ ಕೇಂದ್ರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ.

ತಮಿಳುನಾಡು ಆಡಳಿತ ಯಂತ್ರ ಕುಸಿದಿದೆ: ಸಚಿವರೆಲ್ಲಾ ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾರೆ

ತಮಿಳುನಾಡು ಸಿಎಂ ಅಪೋಲೋ ಅಸ್ಪತ್ರೆ ಸೇರಿ 18 ದಿನ ಕಳೆದಿದೆ. ಏನೂ ಅಪ್​'ಡೇಟ್​ ಸಿಗುತಿಲ್ಲ. ಸದ್ಯಕ್ಕಂತೂ ಅಮ್ಮಾ ಆಸ್ಪತ್ರೆಯಿಂದ ಹೊರಬರುವ ಲಕ್ಷಣ ಕಾಣುತ್ತಿಲ್ಲ. ಜಯಾ ಆಸ್ಪತ್ರೆ ಸೇರಿ ವಾರದೊಳಗೆ ಜಯಾ ಆರೋಗ್ಯದ ಮಾಹಿತಿ ಕೊಡಿ ಎಂದು ಕೇಳಿದ್ದ ಕರುಣಾನಿಧಿ ನಿನ್ನೆ ಕೇಂದ್ರ ಸರ್ಕಾರ ಹಾಗೂ ಹಂಗಾಮಿ ರಾಜ್ಯಪಾಲರಿಗೆ ಸುಧೀರ್ಘ ಪತ್ರವೊಂದನ್ನು ಬರೆದಿದ್ದಾರೆ.

ಕರುಣಾನಿಧಿ ಪತ್ರದ ಹೈಲೈಟ್ಸ್​

ತಮಿಳುನಾಡಿನ ಸಿಎಂ ಜಯಲಲಿತಾ ಅವರಿಗೆ ಏನಾಗಿದೆ? ಸಿಎಂಗೆ ಆರೋಗ್ಯ ಸರಿಯಿಲ್ಲ ಎಂದು ಸಚಿವರು ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಸಂಪುರ್ಣವಾಗಿ ಆಡಳಿತ ಯಂತ್ರ ಕುಸಿದಿದೆ. ಇನ್ನು ಕೇಂದ್ರದಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಜ್ಞರ ತಂಡ ನಮ್ಮ ರಾಜ್ಯಕ್ಕೆ ಆಗಮಿಸಿದೆ. ಈ ಭೇಟಿ ವೇಳೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ತಯಾರಿಗಳೇನು. ಈ ಎಲ್ಲಾ ವಿಚಾರದಲ್ಲೂ ಸರ್ಕಾರ ನಿರಾಸಕ್ತಿ ವಹಿಸಿದೆ. ಹೀಗಾಗಿ ಕೇಂದ್ರ ಹಾಗೂ ಹಂಗಾಮಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು. ಜಯಲಲಿತಾ ಚೇತರಿಸಿಕೊಳ್ಳುವವರಿಗೂ ತಾತ್ಕಾಲಿಕವಾಗಿ ಸಿಎಂ ಹೊಣೆಯನ್ನು ಬೇರೆಯವರಿಗೆ ವರ್ಗಾವಣೆ ಮಾಡಬೇಕು.

ಇನ್ನು ಕರುಣಾನಿಧಿ ಈ ಪತ್ರವನ್ನು ಹಂಗಾಮಿ ರಾಜ್ಯಪಾಲ ಡಾ.ವಿದ್ಯಾಸಾಗರ್​ ಮತ್ತು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಇತ್ತ ಚೆನ್ನೈನ ಅಪೋಲಾ ಅಸ್ಪತ್ರೆಯಿಂದ ಮಾತ್ರ ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಷ್ಟೇ ಅಪ್​ಡೇಟ್ಸ್​ ಹೊರಬಿದ್ದಿದೆ. ಹೆಚ್ಚಿನ ಮಾಹಿತಿ ಸಿಗುತಿಲ್ಲ ಈ ಹಿನ್ನೆಲೆಯಲ್ಲಿ ಕರುಣಾನಿಧಿ ಪತ್ರಕ್ಕೆ ಮಹತ್ವ ಬಂದಿದೆ. ಈಗ ಈ ಪತ್ರಕ್ಕೆ ಆಡಳಿತಾರೂಢ ಅಣ್ಣಾಡಿಎಂಕೆ ಯಾವ ಉತ್ತರ ನೀಡುತ್ತದೆ ಎನ್ನುವುದುಸದ್ಯದ ಕುತೂಹಲ.