ಆ ವೇಳೆ ಅವರ ತಂದೆ ‘ಮೊದಲು ಭಾರತ ತಂಡದಲ್ಲಿ ಸ್ಥಾನ ಸಿಗಲಿ’ ಎಂದಿದ್ದರಂತೆ. ಮೊದಲ ಷರತ್ತನ್ನು ಪೂರೈಸಿದ ಕರುಣ್‌ಗೆ ಅವರ ತಂದೆ ‘ನೀನು ತಂಡದಲ್ಲಿ ನೆಲೆ ನಿಲ್ಲು’ ಎಂದು 2ನೇ ಷರತ್ತು ಹಾಕಿದ್ದಾರೆ.

ಬೆಂಗಳೂರು(ಜು.05): ಪ್ರಸ್ತುತ ಭಾರತ ‘ಎ’ ಟೆಸ್ಟ್ ತಂಡದ ನಾಯಕ ಆಗಿರುವ ಕರುಣ್ ನಾಯರ್ ದುಬಾರಿ ಫೋರ್ಡ್ ಮುಸ್ಟಾಂಗ್ ಕಾರು ಖರೀದಿಸಿದ್ದರ ಹಿಂದೆ ಒಂದು ರೋಚಕ ಕತೆಯಿದೆ.

ಕರುಣ್ ಕಾರು ಖರೀದಿಸಬೇಕೆಂಬ ತಮ್ಮ ಇಚ್ಛೆಯನ್ನು ಮೊದಲು ಅವರ ತಂದೆ ಬಳಿ ಹೇಳಿಕೊಂಡಿದ್ದರಂತೆ. ಆ ವೇಳೆ ಅವರ ತಂದೆ ‘ಮೊದಲು ಭಾರತ ತಂಡದಲ್ಲಿ ಸ್ಥಾನ ಸಿಗಲಿ’ ಎಂದಿದ್ದರಂತೆ. ಮೊದಲ ಷರತ್ತನ್ನು ಪೂರೈಸಿದ ಕರುಣ್‌ಗೆ ಅವರ ತಂದೆ ‘ನೀನು ತಂಡದಲ್ಲಿ ನೆಲೆ ನಿಲ್ಲು’ ಎಂದು 2ನೇ ಷರತ್ತು ಹಾಕಿದ್ದಾರೆ. ಇದನ್ನೂ ಪೂರೈಸಿದ ಕರುಣ್, ಕಾರ್‌ಗಾಗಿ ಅವರ ತಂದೆಯನ್ನು ಕೇಳಿದಾಗ ‘ಶತಕ ಗಳಿಸು ಆ ಮೇಲೆ ನೋಡೋಣ’ ಎಂದಿದ್ದರಂತೆ. ಕೊನೆಗೆ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ತ್ರಿಶತಕ ಬಾರಿಸುವ ಮೂಲಕ ನೆಚ್ಚಿನ ಕಾರು ಖರೀದಿಸಿದೆ ಎಂದು ಕರುಣ್ ಹೇಳಿಕೊಂಡಿದ್ದಾರೆ.