ಚೆನ್ನೈ : ಕಾರ್ತಿ ಚಿದಂಬರಂಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಾರ್ಚ್ 24ರವರೆಗೆ ಕಾರ್ತಿ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶ ನೀಡಿದೆ. ಇಂದು ಕಾರ್ತಿ ಸಿಬಿಐ ಕಸ್ಟಡಿ ಅವಧಿ ಮುಗಿದಿತ್ತು. ಈ ಮತ್ತೆ ವಿಚಾರಣೆ ನಡೆದಿದ್ದು,  ಕಾರ್ತಿ ಅವರನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ  ಸದ್ಯ ಕಾರ್ತಿ ಅವರನ್ನು ತಿಹಾರ್ ಜೈಲ್’ಗೆ ರವಾನೆ ಮಾಡಲಾಗಿದೆ.

ಕಾರ್ತಿ ಇರಿಸಿದ್ದ ಎಲ್ಲಾ ಬೇಡಿಕೆಗಳೂ ಕೂಡ ತಿರಸ್ಕೃತವಾಗಿದ್ದು, ಮನೆ ಆಹಾರವನ್ನು ಸೇವಿಸಲು ಕೂಡ ಅವಕಾಶವನ್ನು ನಿರಾಕರಿಸಲಾಗಿದೆ.  ಸಿಬಿಐಗೆ ಕಾರ್ತಿ ಚಿದಂಬರಂ ಕೇಸಲ್ಲಿ ದೊಡ್ಡ ಜಯ ದೊರಕಿದೆ.  

ಒಟ್ಟು 14 ದಿನಗಳ ಕಾಲ ಸಿಬಿಐ ಕಷ್ಟಡಿಯಲ್ಲಿದ್ದ ಕಾರ್ತಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರಿಂದ  ಮತ್ತೆ ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಸಂಕಷ್ಟ ಎದುರಾಗಿದೆ.