ಸಚಿವೆಗೆ ಕಿವಿ, ಮೂಗು ಕತ್ತರಿಸುವುದಾಗಿ ಬೆದರಿಕೆ

Karni Sena threatens to chop off Rajasthan minister's nose, ears over 'rat' remark
Highlights

 ಈ ಹಿಂದೇ ಪದ್ಮಾವತ್  ಸೇರಿದಂತೆ ಅನೇಕ ರೀತಿಯ ವಿಚಾರಗಳ ಸಂಬಂಧ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಕರ್ಣಿ ಸೇನೆ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.

ಜೈಪುರ್ : ಈ ಹಿಂದೇ ಪದ್ಮಾವತ್  ಸೇರಿದಂತೆ ಅನೇಕ ರೀತಿಯ ವಿಚಾರಗಳ ಸಂಬಂಧ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಕರ್ಣಿ ಸೇನೆ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ. 

ರಾಜಸ್ಥಾನ ಶಿಕ್ಷಣ ಸಚಿವೆ ಕಿರಣ್ ಮಹೇಶ್ವರಿ ಅವರಿಗೆ ಕರ್ಣಿ ಸೇನೆಯು ಸೇನೆಯು ಕಿವಿ, ಮೂಗುಗಳನ್ನು ಕತ್ತರಿಸುವುದಾಗಿ ಬೆದರಿಕೆ ಒಡ್ಡಿದೆ. ರಜಪೂತ ಸಮುದಾಯದ ವಿರುದ್ಧ ಅವರು ಹೇಳಿಕೆಗೆ ನೀಡಿದ್ದಾರೆ ಎಂದು ಇಂತಹ ಹೇಳಿಕೆಯೊಂದನ್ನು ನೀಡಿರುವುದು ಭಾರಿ ವಿವಾದಕ್ಕೆ ಎಡೆ ಮಾಡಕೊಟ್ಟಿದೆ. 

ಕರ್ಣಿ  ಸೇನಾ ಮುಖಂಡ ಮಹಿಪಾಲ್ ಸಿಂಗ್ ಮಾತನಾಡಿ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಇಲಿಗಳು ಬಿಲ ಬಿಟ್ಟು ಹೊರ ಬರುತ್ತವೆ ಎನ್ನುವ ಹೇಳಿಕೆಯನ್ನು ಮಹೇಶ್ವರಿ ನೀಡಿದ್ದಾರೆ.  ಇದಕ್ಕೆ ಅವರು ಕ್ಷಮೆ ಕೇಳಬೇಕು.

ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಈ ಹಿಂದೆ ಪದ್ಮಾವತ್ ವಿಚಾರದಲ್ಲಿ ದೀಪಿಕಾ ಪಡುಕೋಣೆಗೆ ಆದ ಸ್ಥಿತಿಯನ್ನು ನೆನೆಸಿಕೊಳ್ಳಬೇಕು ಎಂದಿದ್ದಾರೆ. ಅವರ ಕಿವಿ, ಮೂಗನ್ನು ಕತ್ತರಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ. 

loader