Asianet Suvarna News Asianet Suvarna News

ಕರ್ನಾಟಕ ಯಕ್ಷಗಾನ ಅಕಾಡಮಿ ವಾರ್ಷಿಕ ಪ್ರಶಸ್ತಿ ಪ್ರಕಟ!

2017ರ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದೆ.  ಬಲಿಪ ನಾರಾಯಣ ಭಾಗವತರು ಸೇರಿದಂತೆ 17 ಯಕ್ಷ ಕಲಾವಿದರು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಇದೇ ಫೆಬ್ರವರಿ 23 ರಂದು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲು ಕರ್ನಾಟಕ ಯಕ್ಷಗಾನ ಆಕಾಡೆಮಿ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 
 

Karnataka Yakshagana academy annual awards 2017 published
Author
Bengaluru, First Published Feb 21, 2019, 2:49 PM IST

ಬೆಂಗಳೂರು(ಫೆ.21): ಕರ್ನಾಟಕ  ಯಕ್ಷಗಾನ ಅಕಾಡೆಮಿ 2017ರ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದೆ. ಬಲಿಪ ನಾರಾಯಣ ಭಾಗವತರು ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಶಂಕರ ಭಾಗವತ , ಬರೆ ಕೇಶವ ಭಟ್, ಎಚ್. ಶ್ರೀಧರ ಹಂದೆ ಕೋಟ, ಎ.ಎಂ. ಶಿವಶಂಕರಯ್ಯ ಹಾಗೂ ಕರಿಯಣ್ಣನವರು ಯಕ್ಷಗಾನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ಯಕ್ಷಗಾನ ನೋಡಲು ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಓಡೋಡಿ ಬಂದ ಜಯಮಾಲ

ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ 10 ಸಾಧಕರನ್ನ ಆಯ್ಕೆ ಮಾಡಲಾಗಿದೆ. ಗಜಾನನ ಗಣಪತಿ ಭಟ್ಟ ಹೊಸ್ತೋಟ, ಮೋಹನ್ ಶೆಟ್ಟಿಗಾರ್, ಪೂಕಳ ಲಕ್ಷ್ಮೀನಾರಾಯಣ ಭಟ್ , ಜಮದಗ್ನಿ ಶೀನ ನಾಯ್ಕ , ಜಂಬೂರು ರಾಮಚಂದ್ರ ಶಾನುಭಾಗ್, ಮಹಾದೇವ ಈಶ್ವರ ಹೆಗಡೆ, ಎ.ಎಸ್. ಲಕ್ಷ್ಮಣಯ್ಯ, ವಿದ್ವಾನ್ ಹರಿದಾಸ ನೀವಣೆ ಗಣೇಶಭಟ್ಟ, ಎಲ್. ಶಂಕರಪ್ಪ, ಟಿ.ಎಸ್.ರವೀಂದ್ರ (ತಲಕಾಡು, ಮೂಡಲಪಾಯ ಯಕ್ಷಗಾನ ಭಾಗವತರು ಮತ್ತು ಮದ್ದಳೆ ವಾದಕರು) ಯಕ್ಷ ಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಯಕ್ಷಗಾನಕ್ಕೆ ಅಪಮಾನ.. ಮೈಕ್ ಕಿತ್ತುಕೊಂಡ ಸಿಬ್ಬಂದಿ!

ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿರುವ ಬಲಿಪ ನಾರಾಯಣ ಭಾಗವತರು ಹಾಗೂ ಡಾ. ಜಿ.ಎಸ್. ಭಟ್ಟ ಯಕ್ಷಗಾನ ಪುಸ್ತಕ ಬಹುಮಾನ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಯಕ್ಷಗಾನ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಫೆ.23 ರಂದು ಪ್ರಶಸ್ತಿ  ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಹೇಳಿದೆ. ಸಂಜೆ 4 ಗಂಟೆಗೆ ಸಾಧಕರನ್ನು ಮರೆವಣಿಗೆ ಮೂಲಕ ಶಿವಮೊಗ್ಗದ ಕುವೆಂಪು ರಂಗಮಂದಿರಕ್ಕೆ ಕರೆತಂದು, ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದಿದೆ. 
 

Follow Us:
Download App:
  • android
  • ios