ಯಾವ ಇಲಾಖೆಗೆ ಎಷ್ಟು ಹಣ?: ಅನುದಾನ ಹಂಚಿಕೆ ಹೇಗೆ?

Karnataka State Budget: Department wise fund allocation details
Highlights

ಯಾವ ಇಲಾಖೆಗೆ ಎಷ್ಟು ಹಣ ಕೊಟ್ಟಿದ್ದಾರೆ ಸಿಎಂ?

ಅನುದಾನ ಹಂಚಿಕೆ ಮಾಡಿದ ಬಗೆ ಹೇಗೆ?

ಕುಮಾರಸ್ವಾಮಿ ಚೊಚ್ಚಲ ಬಜೆಟ್ ಗಾತ್ರ ಎಷ್ಟು?
 

ಬೆಂಗಳೂರು(ಜು.5):  ಸಿಎಂ ಕುಮಾರಸ್ವಾಮಿ ಅವರ ಸುಮಾರು 2 ಲಕ್ಷದ 25 ಸಾವಿರ ಕೋಟಿ ಗಾತ್ರದ ಬಜೆಟ್‌ನಲ್ಲಿ ಎಲ್ಲಾ ಇಲಾಖೆಗಳಿಗೂ ಇಂತಿಷ್ಟು ಅನುದಾನ ನಿಗದಿ ಮಾಡಲಾಗಿದ್ದು, ಈ ಅನುದಾನದ ಅನುಷ್ಠಾನದ ಹೊಣೆಯನ್ನೂ ಆಯಾ ಇಲಾಖೆಗಳಿಗೆ ನೀಡಲಾಗಿದೆ. 

ಪ್ರಸಕ್ತ ಬಜೆಟ್ ನ ಇಲಾಖಾವಾರು ಅನುದಾನದತ್ತ ಗಮನಹರಿಸುವುದಾದರೆ.. ಕಂದಾಯ ಇಲಾಖೆಗೆ 7,180 ಕೋಟಿ ರೂ ಅನುದಾನ, ಲೋಕೋಪಯೋಗಿ ಇಲಾಖೆಗೆ ಶೇ 4ರಂತೆ 10,200 ಕೋಟಿ ರೂ, ಪ್ರಾಥಮಿಕ ಶಿಕ್ಷಣ ಇಲಾಖೆಗೆ 150 ಕೋಟಿ ರೂ, ಶಿಕ್ಷಣ ಕ್ಷೇತ್ರಕ್ಕೆ ಶೇ 11ರಷ್ಟು ಅಂದರೆ 26,581 ಕೋಟಿ ರೂ. ಅನುದಾನ ನೀಡಲಾಗಿದೆ.

ಅಂತೆಯೇ ಜಲ ಸಂಪನ್ಮೂಲ ಇಲಾಖೆಗೆ 18,142 ಕೋಟಿ ರೂ ಅನುದಾನ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ 7642 ಕೋಟಿ ರೂ. ಹಣ ಮೀಸಲಿಡಲಾಗಿದೆ. ಇನ್ನು ನಗರಾಭಿವೃದ್ಧಿಗೆ 17,727 ಕೋಟಿ ರೂ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ 14,449 ಕೋಟಿ ರೂ. ಹಣ ಮೀಸಲಿಡಲಾಗಿದೆ.

ಇನ್ನು ವಿದ್ಯುತ್ ಇಲಾಖೆಗೆ 14,123 ಕೋಟಿ ರೂ, ಸಮಾಜ ಕಲ್ಯಾಣ - 11,788 ಕೋಟಿ ರೂ, ಲೋಕೋಪಯೋಗಿ ಇಲಾಖೆಗೆ 10,200 ಕೋಟಿ ರೂ, ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ  7,953 ಕೋಟಿ ರೂ ಅನುದಾನ ಘೋಷಣೆ ಮಾಡಲಾಗಿದೆ. 

ಇಷ್ಟೇ ಅಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ -9,317 ಕೋಟಿ ರೂ, ಕೃಷಿ ಮತ್ತು ತೋಟಗಾರಿಕೆ - 7,642 ಕೋಟಿ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5,725 ಕೋಟಿ ರೂ, ವಸತಿ ಇಲಾಖೆಗೆ 3,942 ಕೋಟಿ ರೂ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ 3,866 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲದೇ ಇತರೆ ಇಲಾಖೆಗಳಿಗೆ 82,196 ಕೋಟಿ ರೂ. ಮೀಸಲಿಡಲಾಗಿದೆ.

ಹೀಗೆ ಒಟ್ಟು  2 ಲಕ್ಷದ 25 ಸಾವಿರ ಕೋಟಿ ರೂ. ಗಾತ್ರದ ಚೊಚ್ಚಲ ಬಜೆಟ್ ಮಂಡಿಸಿರುವ ಸಿಎಂ ಕುಮಾರಸ್ವಾಮಿ, ಹಲವು ಅಡೆತಡೆಗಳ ಮಧ್ಯೆಯೂ ರೈತರ ಸಾಲಮನ್ನಾ ಘೋಷಣೆ ಮಾಡಿ ತಮ್ಮ ವಾಗ್ದಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಈ ಬಜೆಟ್ ಪ್ರಾದೇಶಿಕ ತಾರತಮ್ಯದ ವಿರುದ್ದ ಕೂಗು ಕೇಳಿ ಬಂದಿದ್ದು, ಕುಮಾರಸ್ವಾಮಿ ತಮ್ಮ ಬಜೆಟ್ ನಲ್ಲಿ ಕೇವಲ ಹಳೇ ಮೈಸೂರು ಭಾಗಕ್ಕೆ ಪ್ರಾಶಸ್ತ್ಯ ನೀಡಿ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರಾಂತ್ಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡಿದೆ.  

loader