ರಾಜ್ಯದಿಂದ ನಾಲ್ವರು ರಾಜ್ಯಸಭೆಗೆ ಆಯ್ಕೆ: ಕಾಂಗ್ರೆಸ್'ನ 4 ಮತ ಅಸಿಂಧು

First Published 23, Mar 2018, 8:42 PM IST
Karnataka RS Election 1 BJP 3 Congress Won
Highlights

ಕೇಂದ್ರ ಚುನಾವಣಾ ಆಯೋಗ ಬಾಬೂರಾವ್ ಚಿಂಚನಸೂರ್, ಕಾಗೋಡು ತಿಮ್ಮಪ್ಪ ಅವರ ಮತಗಳನ್ನು ಅಸಿಂಧುಗೊಳಿಸಿದೆ.

ಬೆಂಗಳೂರು(ಮಾ.23): ರಾಜ್ಯಸಭೆಗೆ ರಾಜ್ಯದಿಂದ ಕಾಂಗ್ರೆಸ್'ನ ಮೂವರು ಹಾಗೂ ಬಿಜೆಪಿಯ ಒಬ್ಬರು ಸ್ಪರ್ಧಿ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಬೆಂಗಳೂರಿನ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್'ನಿಂದ ಸಾಹಿತಿ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಹಾಗೂ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್'ನ 4 ಮತಗಳು ಅಸಿಂಧುವಾಗಿವೆ. ರಾಜೀವ್ ಚಂದ್ರಶೇಖರ್ ಅವರಿಗೆ ಅತಿ ಹೆಚ್ಚು ಮತಗಳು ಲಭಿಸಿವೆ.

ಕೇಂದ್ರ ಚುನಾವಣಾ ಆಯೋಗ ಬಾಬೂರಾವ್ ಚಿಂಚನಸೂರ್, ಕಾಗೋಡು ತಿಮ್ಮಪ್ಪ ಅವರ ಮತಗಳನ್ನು ಅಸಿಂಧುಗೊಳಿಸಿದೆ. ಉಳಿದ ಇಬ್ಬರ ಅಸಿಂಧು ಮತಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಜೆಡಿಎಸ್'ನಿಂದ ಹೆಚ್.ಡಿ.ರೇವಣ್ಣ ಹಾಗೂ ಸಾ.ರಾ.ಮಹೇಶ್ ಮಾತ್ರ ಮತ ಚಲಾಯಿಸಿದ್ದು ಉಳಿದ 28 ಸದಸ್ಯರು ಚುನಾವಣೆ ಬಹಿಷ್ಕರಿಸಿದ್ದರು.

ಯಾರಿಗೆ ಎಷ್ಟು ಮತ

ರಾಜೀವ್ ಚಂದ್ರಶೇಖರ್ -  ಬಿಜೆಪಿ : 50 ಮತ

ಎಲ್ ಹನುಮಂತಯ್ಯ - ಕಾಂಗ್ರೆಸ್ : 44 ಮತ

ಡಾ.ಸಯ್ಯದ್ ನಾಸಿರ್ ಹುಸೇನ್ - ಕಾಂಗ್ರೆಸ್ : 42 ಮತ

ಜಿ.ಸಿ.ಚಂದ್ರಶೇಖರ್ - ಕಾಂಗ್ರೆಸ್ : 46 ಮತ

         

loader