Asianet Suvarna News Asianet Suvarna News

ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಂಡ್ರೆಗೆ ವೇಣುಗೋಪಾಲ್ ಕಜ್ಜಾಯ!

ರಾಮಲಿಂಗಾ ರೆಡ್ಡಿ ರಾಜೀನಾಮೆ| ಈಶ್ವರ್ ಖಂಡ್ರೆಗೆ ವೇಣುಗೋಪಾಲ್ ಫುಲ್ ಕ್ಲಾಸ್ | ಬೀದರ್ ಹೋಗುವಾಗ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ್ದೀರಾ?

Karnataka Politics KC Venugopal Slams Eshwar Khandre Ever Ramalinga Reddy Resignation
Author
Bangalore, First Published Jul 7, 2019, 11:30 AM IST
  • Facebook
  • Twitter
  • Whatsapp

ಬೆಂಗಳೂರು[ಜು.07]: ಈವರೆಗೆ ಯಾರೂ ಊಹಿಸಲಾಗದ ಮೈತ್ರಿ ಶಾಸಕರು ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸುನಾಮಿಯನ್ನು ಎಬ್ಬಿಸಿದೆ. ಈ ಹಿಂದೆ ರಾಜೀನಾಮೆ ವಿಚಾರ ಸದ್ದು ಮಾಡುತ್ತಿದ್ದರೂ ಎಲ್ಲವೂ ಹುಸಿಯಾಗಿತ್ತು. ಆದರೀಗ ಈ ಸುದ್ದಿ ವದಂತಿಯಲ್ಲ ವಾಸ್ತವ ಎನ್ನುವಂತೆ ರಾಜಕಾರಣಿಗಳ ರಾಜೀನಾಮೆ ಪರ್ವ ದೋಸ್ತಿ ಸರ್ಕಾರ ಪತನಗೊಳ್ಳುವ ಅನುಮಾನವನ್ನು ದಟ್ಟವಾಗಿಸಿದೆ. ಈ ಎಲ್ಲಾ ರಾಜಕೀಯ ಹೈಡ್ರಾಮಾದ ನಡುವೆ ಇದೀಗ ರಾಮಲಿಂಗಾ ರೆಡ್ಡಿ ರಾಜೀನಾಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಈಶ್ವರ್ ಖಂಡ್ರೆಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾರೆ.

ಹೌದು ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವುದು ದೋಸ್ತಿ ಸರ್ಕಾರಕ್ಕೆ ಬಹುದೊಡ್ಡ ಶಾಕ್ ನೀಡಿದೆ. ಹೀಗಿದ್ದರೂ ನಿನ್ನೆ ಶನಿವಾರ ಈಶ್ವರ್ ಖಂಡ್ರೆ ರಾಮಲಿಂಗಾ ರೆಡ್ಡಿಯನ್ನು ಭೇಟಿಯಾಗಿ ರಾಜೀನಾಮೆ ನೀಡದಂತೆ ಮನವೊಲಿಸಲು ಯತ್ನಿಸಿದ್ದರು. ಆದರೆ ಖಂಡ್ರೆ ಮಾತಿಗೆ ಜಗ್ಗದ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದರು. ಸದ್ಯ ಇದೇ ವಿಚಾರದ ಮುಂದುವರೆದ ಭಾಗವಾಗಿ ವೇಣುಗೋಪಾಲ್ ಈಶ್ವರ್ ಖಂಡ್ರೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಖಂಡ್ರೆ ಬಳಿ ಮಾತನಾಡಿರುವ ವೇಣುಗೋಪಾಲ್ ’ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವ ವಿಚಾರ ತಿಳಿದಿದ್ದರೂ ಕೊನೆಯ ಕ್ಷಣದವರೆಗೆ ಯಾಕೆ ಸುಮ್ಮನಾದ್ರಿ? ಬೀದರ್‌ ಕಾರ್ಯಕ್ರಮ ರದ್ದುಗೊಳಿಸಿ ಮೊನ್ನೆ ರಾತ್ರಿಯೇ ರಾಮಲಿಂಗಾ ರೆಡ್ಡಿ ಮನವೊಲಿಸಬಹುದಿತ್ತಲ್ಲವೇ? ರಾಜೀನಾಮೆ ನೀಡುವ ದಿನ ಬೆಳಿಗ್ಗೆ ಹೋಗಿ ಭೇಟಿ ಮಾಡಿದ್ದೀರಿ, ಇದರಿಂದ ಏನು ಪ್ರಯೋಜನ? ದಿನೇಶ್ ವಿದೇಶ ಪ್ರವಾಸದಲ್ಲಿದ್ದಾರೆಂದು ಎಂದಾಗ ಕೊಂಚ ಬೇಗ ಎಚ್ಚೆತ್ತುಕೊಳ್ಳಬೇಕಿತ್ತು' ಎಂದು ಕಿಡಿ ಕಾರಿದ್ದಾರೆನ್ನಲಾಗಿದೆ.

Follow Us:
Download App:
  • android
  • ios