ಬೆಂಗಳೂರು[ಜು.12]: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಹಸನದಿಂದ ದೋಸ್ತಿ ಸರ್ಕಾರ ಪತನಗೊಳ್ಳುವ ಆತಂಕದಲ್ಲಿದೆ. ಹೀಗಿದ್ದರೂ ಅತೃಪ್ತ ಶಾಸಕರ ತಲೆನೋವು ಮಾತ್ರ ತಪ್ಪಿಲ್ಲ. ದೋಸ್ತಿಗೆ ಸಡ್ಡು ಹೊಡೆಯಲು ಮುಂಬೈನಲ್ಲಿ ಬೀಡು ಬಿಟ್ಟಿರುವ ಶಾಸಕರಿ ಅನರ್ಹತೆ, ವಿಪ್ ಅಸ್ತ್ರಗಳು ತೊಡಕಾಗಿವೆ. ಈ ಕಂಟಕಗಳು ಎದುರಾಗಿರುವ ಬೆನ್ನಲ್ಲೇ ಅತೃಪ್ತ ಶಾಸಕರಿಗೆ ಮತ್ತೊಂದು ಶಾಕ್ ಬಂದೆರಗಿದೆ.

ರಾಜೀನಾಮೆ ನಿಡಿ ಬಮುಂಬೈ ಹೋಟೆಲ್ ಸೇರಿದ್ದ ನಾಯಕರನ್ನು ಮರಳಿ ಕರೆ ತರಲು ದೋಸ್ತಿ ನಾಯಕರು ನಾನಾ ಯತ್ನಗಳನ್ನು ನಡೆಸಿದರು. ಮನವೊಲಿಸುವಲ್ಲಿ ವಿಫಲರಾದಾಗ ಕಾಂಗ್ರೆಸ್ ಪಕ್ಷದ ನಾಯಕರು ಅತೃಪ್ತರ ವಿರುದ್ಧ ಅನರ್ಹತೆಯ ಅಸ್ತ್ರ ಎಸೆದರು. ರಾಜಕೀಯ ಭವಿಷ್ಯ ಕಂಟಕ ಇದ್ದರೂ ಹಠ ಬಿಡದ ನಾಯಕರು ಶಾಸಕಾಂಗ ಸಭೆಗೆ ಹಾಜರಾಗಬೇಕೆಂದು ವಿಪ್ ಕೂಡಾ ಜಾರಿಗೊಳಿಸಿದೆ. ಇವೆಲ್ಲದರ ನಡುವೆ ಇದೀಗ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೇಳಿ ಯೂತ್ ಕಾಂಗ್ರೆಸ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಶಾಸಕರ ರಾಜೀನಾಮೆ ಪ್ರಜಾಪ್ರತಿನಿಧಿ ಕಾಯಿದೆಗೆ ವಿರುದ್ಧವಾಗಿದೆ. ಹೀಗಾಗಿ ಈ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸುಮಾರು 400 ಯೂತ್ ಕಾಂಗ್ರೆಸ್ ಘಟಕಗಳಿಂದ ಅರ್ಜಿ ಸಲ್ಲಿಸಲಾಗಿದೆ. ಆದರೆ ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.